Actress Prema: ಸ್ಯಾಂಡಲ್‌ವುಡ್ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!
ಕನ್ನಡ ಚಿತ್ರರಂಗದ ನಟಿ ಪ್ರೇಮಾ 2006 ರಲ್ಲಿ ಐಟಿ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಚಲನಚಿತ್ರಗಳಿಂದ ದೂರವಿದ್ದು, ತಮ್ಮ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದರು.
ಮದುವೆಯಾಗಿ ಕೆಲವು ವರ್ಷಗಳ ನಂತರ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳು ಇಬ್ಬರ ಮಧ್ಯ ತಲೆದೂರಿದ್ದರ ಹಿನ್ನೆಲೆಯಲ್ಲಿ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.. ಹೀಗಾಗಿ ನಟಿ 10 ವರ್ಷಗಳ ನಂತರ ಅಂದರೇ 2016 ರಲ್ಲಿ ತಮ್ಮ ಪತಿಯಿಂದ ಬೇರ್ಪಟ್ಟರು.
ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ, ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ಸ್ಯಾಂಡಲ್‌ವುಡ್ ಮೂರನೇ ನಟಿ..
ಕಳೆದ ಹಲವು ದಿನಗಳಿಂದ ನಟಿ ಪ್ರೇಮಾ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಮತ್ತೆ ಮದುವೆಯಾಗಲಿದ್ದಾರೆ ಎಂಬ ವರದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ನಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ..
ಇನ್ನು ಪ್ರೇಮಾ ಅವರು ಸವ್ಯಸಾಚಿ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಎದುರು ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು..