Actress Prema: ಡಿವೋರ್ಸ್..‌ ಡಿಪ್ರೆಷನ್‌.. ನಂತರ ಕ್ಯಾನ್ಸರ್? ಎರಡನೇ ಮದುವೆ ಆಗ್ತಾರಾ ನಟಿ ಪ್ರೇಮಾ !!

Thu, 28 Mar 2024-8:16 am,

90 ರ ದಶಕದಲ್ಲಿ ಕನ್ನಡದ ಟಾಪ್ ನಟಿಯರಲ್ಲಿ ಪ್ರೇಮಾ ಒಬ್ಬರಾಗಿದ್ದರು. 2006 ರಲ್ಲಿ ಪ್ರೇಮಾ ಜೀವನ್ ಅಪ್ಪಾಚು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಸಿನಿರಂಗದಿಂದ ದೂರ ಉಳಿದರು. 

ಜೀವನ್ ಅಪ್ಪಾಚು ಜೊತೆ ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಎದುರಾದ ಕಾರಣ ಸಂಬಂಧ ಮುರಿದು ಹೋಯಿತು. ಡಿವೋರ್ಸ್ ಪಡೆದು ಇಬ್ಬರೂ ದೂರವಾದರು. 

ಸಂದರ್ಶನವೊಂದರಲ್ಲಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದ ನಟಿ ಪ್ರೇಮಾ, ಇದು ನನ್ನ ವೈಯಕ್ತಿಕ ನಿರ್ಧಾರ. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತ ಎರಡನೇ ಮದುವೆ ಆಗುತ್ತೇನೆ. 70 ವರ್ಷ ವಯಸ್ಸಿನಲ್ಲೂ ಮದುವೆ ಆದವರಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದರು.

ಕೆಲ ವರ್ಷಗಳ ಹಿಂದೆ ನಟಿ ಪ್ರೇಮಾ ಅವರು ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್‌ ಆಗಿದೆ ಎಂಬ ಗುಸುಗುಸು ಕೇಳಿಬಂದಿತ್ತು.

ನಾನು ಡಿಪ್ರೆಷನ್‌ಗೆ ಹೋಗಿದ್ದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಇದ್ದೆ. ನಾನು ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಎಂಬ ವದಂತಿ ಹಬ್ಬಿತ್ತು. ಕ್ಯಾನ್ಸರ್‌ ಎಲ್ಲಾ ಏನಿಲ್ಲ ಅದು ಸುಳ್ಳು ಎಂದು ನಟಿ ಪ್ರೇಮಾ ತಿಳಿಸಿದ್ದರು.

ನಮ್ಮೂರ ಮಂದಾರ ಹೂವೆ, ತುತ್ತಾ ಮುತ್ತಾ, ಯಜಮಾನ, ಆಪ್ತಮಿತ್ರ ಸೇರಿದಂತೆ ಹಲವು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿ ಪ್ರೇಮಾ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳಿನಲ್ಲಿಯೂ ನಟಿ ಪ್ರೇಮಾ ನಟಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link