ಬ್ಲೌಸ್ ಬಟನ್ ಹಾಕದೇ ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಕಣ್ಸನ್ನೆ ಬೆಡಗಿಯ ಹಾಟ್ ಲುಕ್’ಗೆ ಫ್ಯಾನ್ಸ್ ಫಿದಾ
ಕಣ್ಣು ಕುಕ್ಕುವಂತಿರುವ ಫೋಟೋಗಳಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸಖತ್ ಆಗಿ ಮಿಂಚಿದ್ದಾರೆ. ಸಾಂಪ್ರದಾಯಿಕ ಸೀರೆಯನ್ನುಟ್ಟು ಕೊಳದ ಮಧ್ಯದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸರಳವಾದ ಕಿವಿಯೋಲೆ, ಮೂಗುತ್ತಿ, ಚಿನ್ನದ ಸರ, ಸೊಂಟಕ್ಕೆ ಡಾಬು ತೊಟ್ಟುಕೊಂಡು ಸೌಂದರ್ಯದ ಗಣಿಯಾಗಿ ಕಾಣಿಸಿಕೊಂಡಿದ್ದಾರೆ.
ಇವೆಲ್ಲದರ ಜೊತೆಗೆ ಹಣೆಯ ಮೇಲೆ ಕೆಂಪು ಬಿಂದಿಯನ್ನು ಇಟ್ಟುಕೊಂಡಿದ್ದು, ಪ್ರಿಯಾ ಮೈಮಾಟಕ್ಕೆ ಎಂಥವರೂ ಫಿದಾ ಆಗದಿರರು. ಸಾಂಪ್ರದಾಯಿಕ ಉಡುಪಿಗೆ ಆಧುನಿಕತೆಯ ಸ್ಪರ್ಶ ನೀಡಿರುವ ಈ ಲುಕ್ ಪ್ರಿಯಾ ಅವರಿಗೆ ಬಹಳ ಮುದ್ದಾಗಿ ಒಪ್ಪುತ್ತಿದೆ.
ಇನ್ನು ಪ್ರಿಯಾ ವಾರಿಯರ್ ಕೊನೆಯದಾಗಿ ಸಮುದ್ರಕನಿ ನಿರ್ದೇಶನದ ತೆಲುಗು ಚಲನಚಿತ್ರ BRO ನಲ್ಲಿ ಕಾಣಿಸಿಕೊಂಡಿದ್ದರು.
ಇದಲ್ಲದೆ, ನಟಿ ದಿವ್ಯಾ ಖೋಸ್ಲಾ ಕುಮಾರ್ ಮತ್ತು ಮೀಜನ್ ಜಾಫ್ರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಯಾರಿಯಾನ್ 2 ಎಂಬ ಹಿಂದಿ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಅಂಜಲಿ ಮೆನನ್ ಅವರ 2014ರಲ್ಲಿ ರಿಲೀಸ್ ಆದ ಮಲಯಾಳಂ ಚಲನಚಿತ್ರ ‘ಬೆಂಗಳೂರು ಡೇಸ್’ನ ಅಧಿಕೃತ ರಿಮೇಕ್ ಆಗಿದೆ.