ತನ್ನ ಮೈಮಾಟದಿಂದ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಆಧ್ಯಾತ್ಮ ಆಯ್ದು ಕೊಂಡಿದ್ದು ಯಾಕೆ? ಅಷ್ಟಕ್ಕೂ ಯಾರು ಆ ನಟಿ.. ?
ಬದುಕೆಂಬುದು ಊಹಿಸಲಾಗದ ಬಂಡಿಯಂತೆ... ಯಾವಗ ಯಾವ ದಿಕ್ಕಿಗೆ ಸಾಗುತ್ತೂ ಅಂದಾಜಿಗೂ ಸಿಗುವುದಿಲ್ಲ. ಒಂದೊಮ್ಮೆ ದಿಢೀರನೆ ಮೇಲೆದ್ದು ನಿಂತರೆ, ಮತ್ತೊಮ್ಮೆ ದೊಪ್ಪನೆ ಕೆಳ ಬೀಳಬಹುದು. ಆದರೆ ಇದಾವುದರ ಅರಿವು ನಮಗೆ ಇರುವುದಿಲ್ಲ. ಬದುಕು ನಮ್ಮನ್ನು ಕರೆದೊಯ್ಯುವ ಕಡೆಗೆ ನಾವು ಸಾಗಲೇಬೇಕಾದ ಅನಿವಾರ್ಯತೆ . ನಮಗೆ ಇಷ್ಟ ಇದ್ದರೂ ಇಲ್ಲದಿದ್ದರೂ ಸಾಗಲೇಬೇಕಾದುದು ಜೀವನದ ನಿಯಮ.
ಅಷ್ಟಕ್ಕೂ ಯಾಕೆ ನಾವು ಈ ಬಗ್ಗೆ ಹೇಳುತ್ತಿದ್ದೇವೆ ಅಂದುಕೊಂಡ್ರಾ. ಅದಕ್ಕೆ ಕಾರಣ ಆ ನಟಿ...! ಒಂದು ಕಾಲದಲ್ಲಿ ತನ್ನ ಮೈ ಮಾಟದಿಂದ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಜೀವನದಲ್ಲಿ ತೆಗೆದುಕೊಂಡಂತಹ ಆ ನಿರ್ಧಾರ.ಅಷ್ಟಕ್ಕು ಏನಾಯ್ತು? ಆ ನಟಿ ಯಾರು ಅಂತೀರಾ? ಮುಂದೆ ಓದಿ...
ಎರಡು ದಶಕದ ಹಿಂದೆ ತನ್ನ ಮೋಹಕ ಲುಕ್‌ನಿಂದ ಕಿಕ್ ಏರಿಸಿದ ನಟಿ ಪ್ರಿಯಾಂಕ ಕೊಠಾರಿ ಶಿವ, ಡಾರ್ಲಿಂಗ್, ಜೇಮ್ಸ್ ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ನಟಿ. ಈಕೆ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದರು. ಪುನೀತ್ ರಾಜ್ ಕುಮಾರ್ ಅವರ ರಾಜ್ ದಿ ಶೋ ಮ್ಯಾನ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣಹಚ್ಚಿದವರು.
ಕನ್ನಡ, ತೆಲುಗು, ತಮಿಳು, ಹಿಂದಿ ಅಂತಾ ಸೌತ್ ಇಂಡಸ್ಟ್ರಿಯಲ್ಲಿ ತಮ್ಮ ಚಾಪು ಮೂಡಿಸಿದ ನಟಿ ಪ್ರಿಯಾಂಕ, 2016 ರಿಂದ ಸಿನಿಮಾ ಅವಕಾಶಗಳಿಂದ ವಂಚಿತರಾಗಿ ಬಣ್ಣದ ಜಗತ್ತಿನಿಂದ ದೂರ ಉಳಿದರು. ಸಿನಿಮಾ ಕೈ ಬಿಡುತ್ತಿದ್ದಂತೆ ಭಾಸ್ಕರ್ ಎಂಬ ವ್ಯಕ್ತಿಯನ್ನು ವಿವಾಹ ಕೂಡ ಆದರು. ಹೀಗೆ ಬಣ್ಣದ ಲೋಕದಲ್ಲಿ ಮಿಂಚಿದ್ದ ಪ್ರಿಯಾಂಕ ಇದೀಗ ಆಧ್ಯಾತ್ಮ ಆಯ್ದುಕೊಂಡಿದ್ದಾರೆ.
ಬಿಹಾರದ ಬೋಧಗಯಾದಲ್ಲಿನ ಬೋಧಿವೃಕ್ಷದ ಕೆಳಗೆ ಕೂತು ಪ್ರಿಯಾಂಕ ಧ್ಯಾನ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಅರ್ರೇ ಏನಪ್ಪಾ ಇದು, ತಮ್ಮ ಮೈಮಾಟದಿಂದ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಪ್ರಿಯಾಂಕ ಇಂತಹ ಆಯ್ಕೆ ಯಾಕೆ ಮಾಡಿದರು ಎಂದು ಎಲ್ಲರು ಪ್ರಶ್ನೆ ಮಾಡುವಂತಾಗಿದೆ.
ಸದ್ಯಕ್ಕೆ ಸಿನಿಮಾದಿಂದ ದೂರ ಉಳಿದಿರುವ ನಟಿ ಹೀಗೊಂದು ನಿರ್ಧಾರ ತೆಗೆದುಕೊಂಡಿರುವುದು. ಮತ್ತೇ ಇವರು ಸಿನಿಮಾಗೆ ವಾಪಸ್ ಬರೋದಿಲ್ವಾ ಎಂಬ ಪ್ರಶ್ನೆಯನ್ನು ಸಹ ಹುಟ್ಟುಹಾಕಿದೆ.