ಅವರಿಂದಲೇ ನನ್ನ ಕೆರಿಯರ್ ಹಾಳಾಯ್ತು..! ʼಜಮಿನ್ದಾರುʼ ನಟಿ ರಾಶಿ ಶಾಕಿಂಗ್ ಹೇಳಿಕೆ
1999 ರಲ್ಲಿ ಬಿಡುಗಡೆಯಾದ ಸ್ನೇಹ ಸಿನಿಮಾದ ಮೂಲಕ ರಾಶಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಈ ಸಿನಿಮಾದಲ್ಲಿ ರವಿಚಂದ್ರನ್‌ಗೆ ಜೊತೆಯಾಗಿ ನಟಿಸಿದ್ದರು.
ರಾಶಿಯವರ ನಿಜವಾದ ವಿಜಯಾ. 1980ರಲ್ಲಿ ಆಂಧ್ರಪ್ರದೇಶದ ಪಚ್ಚಿಮ ಗೊದಾವರಿಯಲ್ಲಿ ಜನಿಸಿದರು. 1988ರಲ್ಲಿ ಬಾಲನಟಿಯಾಗಿ ತೆಲುಗಿನಲ್ಲಿ ವೃತ್ತಿ ಜೀವನ ಆರಂಭಿಸಿರು.
1988 ರಲ್ಲಿ ರಾವ್ ಗಾರಿ ಇಲ್ಲು ಎಂಬ ತೆಲುಗು ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರಲೋಕಕ್ಕೆ ಕಾಲಿಟ್ಟರು.
ಸ್ನೇಹ, ಜಮಿನ್ದಾರು, ನಿನ್ನೆ ಪ್ರಿತಿಸುವೆ, ರಾಜ ನರಸಿಂಹ, ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ರಾಶಿ ನಟಿಸಿದ್ದಾರೆ..
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಮುಂತಾದ ಭಾಷೆಗಳ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ರಾಶಿ.
ಸಧ್ಯ ರಾಶಿ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. 2003ರಲ್ಲಿ ನಟಿಸಿದ ಚಿತ್ರವೊಂದರಿಂದ ತಮ್ಮ ಇಮೇಜ್ ಡ್ಯಾಮೇಜ್ ಆಯ್ತು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
2003 ರಲ್ಲಿ ತೆರೆಕಂಡ ʼಜಯಂʼನ ಖಳನಟನಾಗಿ ನಟಿಸಿದ್ದ ಗೋಪಿಚಂದು ಜೊತೆ ರಾಶಿ ನಟಿಸಿದ್ದರು. ಈ ಚಿತ್ರದಲ್ಲಿ ಮಿತಿ ಮೀರಿದ ದೃಶ್ಯಗಳಲ್ಲಿ ನಟಿಸಿದ್ದರಿಂದ ಸರಿಯಾದ ಸಿನಿಮಾ ಅವಕಾಶಗಳು ಸಿಗಲಿಲ್ಲ, ಇದರಿಂದ ನನ್ನ ಕೆರಿಯರ್ ಹಾಳಾಗಿ ಹೋಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಅಲ್ಲದೆ, ಜಯಂ ಚಿತ್ರದ ಕಥೆ ಹೇಳುವಾಗ ನಿರ್ದೇಶಕರು ಬೇರೆಯದೇ ರೀತಿಯಲ್ಲಿ ಹೇಳಿದ್ದರು, ಆದರೆ ಶೂಟಿಂಗ್ ಸಮಯದಲ್ಲಿ ಅವರು ವಿಭಿನ್ನ ಆವೃತ್ತಿಯನ್ನು ತೆಗೆದುಕೊಂಡರು ಎಂದು ರಾಶಿ ಆರೋಪಿಸಿದ್ದಾರೆ. ಸಧು ನಟಿಯ ಹೇಳಿಕೆ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ..
ರಾಶಿ 2005 ರಲ್ಲಿ ನಿರ್ದೇಶಕ ಶ್ರೀ ಮುನಿಯನ್ನು ವಿವಾಹವಾದರು. 2017 ರಲ್ಲಿ ಲಂಕಾ ಚಿತ್ರದಲ್ಲಿ ಕೊನೆಯದಾಗಿ ನಟಿಸಿದರು. ನಂತರ ಅವರು ಜೆಮಿನಿ ಟಿವಿ ಮತ್ತು ಸ್ಟಾರ್ ಮಾದಂತಹ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.