ಶೂಟಿಂಗ್ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ವೈರಲ್!
ಸದ್ಯ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.
ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಸ್ಯಾಂಡಲ್ವುಡ್ʼನ ಕೆಲ ತಾರೆಯರನ್ನೊಳಗೊಂಡ ನಿಯೋಗ, ಕಾಸ್ಟಿಂಗ್ ಕೌಚ್ ಬಗ್ಗೆ ತನಿಖೆ ನಡೆಸುವಂತೆ ಮಾಡಿದೆ. ಜೊತೆ ಈ ಬಗ್ಗೆ ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಈ ಬೆನ್ನಲ್ಲೇ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದು ಮುಂದೆ ತಿಳಿಯೋಣ.
"ಆ ಥರಹ ಕೇವಲ ನಮ್ಮ ಇಂಡಸ್ಟ್ರಿಯಲ್ಲಿಯೇ ಇದೆಯೆಂದು ಹೇಳುವುದು ಸಾಧ್ಯವಿಲ್ಲ. ಪ್ರತಿಯೊಂದು ಕಡೆಯೂ ಇದು ಇದ್ದಿದ್ದೇ, ಸಹಜ ಇದು. ಹಾಗಂತ ನನ್ನ ಜೀವನದಲ್ಲಿ ನಡೆದಿಲ್ಲ ಎಂಬ ಕಾರಣಕ್ಕೆ ಬೇರೆಯವರ ಜೀವನದಲ್ಲಿ ನಡೆದಿರಲ್ಲ ಎಂದು ಹೇಳೋದಿಕ್ಕೆ ಆಗೋದಿಲ್ಲ" ಎಂದಿದ್ದಾರೆ,
ನಾನು ಇಂಡಸ್ಟ್ರಿಗೆ ಬಂದ ದಿನದಿಂದಲೂ ನನಗೆ ಇಂತಹ ಅನುಭವ ಆಗಿಲ್ಲ, ಏಕೆಂದರೆ ನಾನು ಬಂದಾಗ ಒಳ್ಳೊಳ್ಳೇ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಹೀಗಾಗಿ ಕೆಟ್ಟ ಅನುಭವ ಆಗಿಲ್ಲ. ಆದರೆ ಇಂತಹದ್ದೊಂದು ಅನುಭವ ಆಗಿದೆ ಎಂದು ನಟಿ ರಾಧಿಕಾ ಮಾತು ಮುಂದುವರೆಸಿದರು.
"ಸ್ಟಾಕಿನ್ಸ್ (ಕಾಲಿಗೆ ಧರಿಸುವ ಒಂದುರೀತಿಯ ತೆಳುವಾದ ಬಟ್ಟೆ) ಶೂಟಿಂಗ್ ಮಾಡುವ ಸಂದರ್ಭದಲ್ಲಿ ಹರಿದೋಯ್ತು. ಆಗ ನಾನು ಸಣ್ಣ ಹುಡುಗಿ. ಅಲ್ಲಿದ್ದವರ ಬಳಿ ಸ್ಟಾಕಿನ್ಸ್ ಹರಿದು ಹೋಗಿದೆ, ಬೇರೆ ಕೊಡ್ತೀರಾ ಅಂತ ಕೇಳಿದೆ. ಅದಕ್ಕೆ ಅವರು, ಈ ಮೂತಿಗೆ ಸ್ಟಾಕಿನ್ಸ್ ಬೇರೆ ಬೇಕಾ? ಹೋಗಮ್ಮ, ಹರಿದುಹೋಗಿರೋದನ್ನೇ ಹಾಕೋ ಅಂದ್ರು"
"ನನಗೆ ಅಚ್ಚರಿಯಾಯ್ತು, ಇಂಡಸ್ಟ್ರಿಯಲ್ಲಿ ಹೀಗೆಲ್ಲಾ ಮಾತಾಡ್ತಾರಾ? ಅಂತ. ಯಾಕೆಂದ್ರೆ ಮುಂಚೆ ನಾವು ಈ ಥರ ಮಾತುಗಳನ್ನ ಕೇಳಿರುವುದಿಲ್ಲ. ಆದ್ರೆ ಆಗ ಅಂದುಕೊಂಡೆ, ನಮ್ಮ ಇಷ್ಟು ಟೀಂ ಅಲ್ಲಿ ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದಾರೆ. ಒಬ್ಬನೇ ಒಬ್ಬ ಮಾಡಿದ ತಪ್ಪಿಗೆ ಇಂಡಸ್ಟ್ರಿ ತಪ್ಪು ಎಂದು ಹೇಳೋಕೆ ಆಗಲ್ಲ"
"ಎಲ್ಲೋ ಒಂದು ಕಡೆ ನಡೆಯುತ್ತೆ, ತುಂಬಾ ಒಳ್ಳೆಯವರು ಸಹ ನಮ್ಮಲ್ಲಿ ಇದ್ದಾರೆ, ಎಷ್ಟು ಒಳ್ಳೊಳ್ಳೆ ನಿರ್ದೇಶಕ, ನಿರ್ಮಾಪಕರಿದ್ದಾರೆ. ನನಗೆ ಈಗ ಎಷ್ಟೇ ಹೆಸರು ಬಂದಿರಲಿ, ದುಡ್ಡು ಬಂದಿರಲಿ, ಅವೆಲ್ಲವನ್ನೂ ಕೊಟ್ಟಿರುವುದು ನನ್ನ ಸಿನಿಮಾ ಇಂಡಸ್ಟ್ರೀ. ಹೀಗಾಗಿ ನನ್ನ ತವರು ಮನೆ ಬಗ್ಗೆ ಹೇಗೆ ತಪ್ಪಾಗಿ ಮಾತನಾಡಲಿ" ಎಂದು ಹೇಳಿಕೆ ನೀಡಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಟಿವಿ9 ಕನ್ನಡ ವಾಹಿನಿಯಲ್ಲಿ ನಟಿ ರಾಧಿಕಾ ಕುಮಾರಸ್ಟಾಮಿ ನೀಡಿರುವ ಈ ಹೇಳಿಕೆ ಭಾರೀ ವೈರಲ್ ಆಗಿದೆ.