ಮದುವೆ ನಂತರ ಬೋಲ್ಡ್ ಅವತಾರ ತಾಳಿದ ರಾಕುಲ್..! ಈಗ ಈಕೆ ಮತ್ತಷ್ಟು ಕ್ಯೂಟ್.. ಫೊಟೋಸ್ ಇಲ್ಲಿವೆ..
ರಾಕುಲ್ ಪ್ರೀತ್ ಸಿಂಗ್ ಸೌತ್ ಸಿನಿರಂಗದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು.. ಗಿಲ್ಲಿ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿದ್ದರೂ, ಹೆಚ್ಚಾಗಿ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದಾರೆ...
ತೆಲುಗಿನಲ್ಲಿ ಗೋಪಿ ಚಂದ್ ಜೊತೆ ಲೌಕ್ಯಂ, ಮಂಚು ಮನೋಜ್ ಜೊತೆ ಕರೆಂಟ್ ತೀಗ, ರಾಮ್ ಜೊತೆ ಪಡ್ಡಗ ಕರ್ಷ ಮುಂತಾದ ಸಿನಿಮಾಗಳನ್ನು ಮಾಡಿ ಉತ್ತಮ ಸ್ಟಾರ್ ಡಮ್ ಗಳಿಸಿದ ರಾಕುಲ್ ಪ್ರೀತ್ ನಂತರ ಸತತವಾಗಿ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ..
ರಾಮ್ ಚರಣ್‌ನಿಂದ ಹಿಡಿದು ನಾಗ ಚೈತನ್ಯವರೆಗೆ ಎಲ್ಲರೊಂದಿಗೂ ಚಿತ್ರಗಳಲ್ಲಿ ನಟಿಸಿರುವ ರಾಕುಲ್ ಈಗ ಅದೇ ಟಾಲಿವುಡ್‌ನಿಂದ ಆಫರ್‌ಗಾಗಿ ಕಾಯುತ್ತಿದ್ದಾರೆ. ಕೊನೆಗೂ ಈ ಚೆಲುವೆ ತೆಲುಗಿನಲ್ಲಿ 'ಭಾರತೀಯಡು 2' ಸಿನಿಮಾ ಮಾಡಿದರು.
ಮಧ್ಯದಲ್ಲಿ ರಾಕುಲ್ ಹಾರರ್ ಸಿನಿಮಾದೊಂದಿಗೆ ಬಂದರು.. ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ. ಈ ವರ್ಷ 'ಅಯಲನ್' ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ..
ಈ ವರ್ಷದ ಫೆಬ್ರವರಿ 21 ರಂದು, ಅವರು ತಮ್ಮ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಗೋವಾದಲ್ಲಿ ವಿವಾಹವಾದರು. ಮದುವೆಯ ನಂತರವೂ ನಟಿ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಈಗ ಕೈಯಲ್ಲಿ ಯಾವುದೇ ಆಫರ್‌ಗಳಿಲ್ಲದ ಕಾರಣ ರಾಕುಲ್ ಪ್ರೀತ್ ಮತ್ತೆ ಹಾಟ್ ಫೋಟೋ ಶೂಟ್‌ಗೆ ಮುಂದಾಗಿದ್ದು, ಸಧ್ಯ ಚೆಲುವೆಯ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ..
ಆಫರ್ ಗಳಿಗಾಗಿ ರಾಕುಲ್ ಪ್ರೀತ್ ಮತ್ತೆ ಈ ರೇಂಜ್ ಫೋಟೋ ಶೂಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..