ʼಪುಷ್ಪಾ-2ʼ ಸಿನಿಮಾಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಇಷ್ಟೊಂದಾ? ಭಾರತೀಯ ಚಿತ್ರರಂಗದಲ್ಲೇ ಇದು ಅತಿ ಹೆಚ್ಚು ಸಂಭಾವನೆಯಂತೆ!
ಪುಷ್ಪ 2' ಡಿಸೆಂಬರ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅದರ ಮುಂಗಡ ಬುಕ್ಕಿಂಗ್ ನವೆಂಬರ್ 30 ರಿಂದ ಪ್ರಾರಂಭವಾಗಿದೆ. ಆದರೆ ಅದಕ್ಕೂ ಮುನ್ನ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರೆಸ್ ಮೀಟ್ ನಡೆದಿತ್ತು. ಇಬ್ಬರೂ ಒಂದು ಹಾಡಿನಲ್ಲಿ ಕುಣಿದು ಕುಪ್ಪಳಿಸಿದರು.
ಇನ್ನೊಂದೆಡೆ ಅದಕ್ಕೂ ಮೊದಲು, ಗೋವಾದಲ್ಲಿ ನಡೆದ IFFIನಲ್ಲಿ, 'ಪುಷ್ಪ 2' ಚಿತ್ರದ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ರಶ್ಮಿಕಾ ಆಗಲಿದ್ದಾರೆ ಎಂಬ ವದಂತಿ ಬಗ್ಗೆ ಮೌನ ಮುರಿದಿದ್ದಾರೆ.
ಈ ವರ್ಷ ಗೋವಾದಲ್ಲಿ ನಡೆದ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಫಿಲ್ಮ್ ಫೆಸ್ಟಿವಲ್ 2024 ರಲ್ಲಿ, 'ಪುಷ್ಪಾ 2' ನಂತರ ಅತ್ಯಂತ ಸಂಭಾವನೆ ಪಡೆಯುವ ಮಹಿಳಾ ನಟಿ ಎಂಬ ವದಂತಿಗಳ ಬಗ್ಗೆ ಮಾತನಾಡುತ್ತಾ, 'ಇದು ನಿಜವಲ್ಲದ ಕಾರಣ ನಾನು ಇದನ್ನು ಒಪ್ಪುವುದಿಲ್ಲ' ಎಂದು ಹೇಳಿದರು.
'ಪುಷ್ಪಾ' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ 2 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಇನ್ನು ಎರಡನೇ ಭಾಗ ಅಂದರೆ 'ಪುಷ್ಪ 2' ಚಿತ್ರಕ್ಕೆ ಅವರಿಗೆ 10 ಕೋಟಿ ರೂ. ಸಂಭಾವನೆ ನೀಡಲಾಗಿದೆಯಂತೆ. ಆದರೆ ಈ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 29 ಶುಕ್ರವಾರದಂದು ಮುಂಬೈನಲ್ಲಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಾ ಮಂದಣ್ಣ 'ಸಾಮಿ' ಹಾಡಿಗೆ ಹುಕ್ ಸ್ಟೆಪ್ ಹಾಕಿದರು.