ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ತಂದೆ-ತಾಯಿ ಹೇಗಿದ್ದಾರೆ ಗೊತ್ತಾ? ಅಂದದಲ್ಲಿ ಮಗಳನ್ನೂ ಮೀರಿಸ್ತಾರೆ ಪೋಷಕರು!
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಸ್ಯಾಂಡಲ್ವುಡ್ ಮೂಲಕ ಸಿನಿ ಜರ್ನಿ ಶುರು ಮಾಡಿ ಪ್ರಸ್ತುತ ಬಾಲಿವುಡ್’ನಲ್ಲಿ ಲಕ್ ಪರೀಕ್ಷೆ ಮಾಡಿ ಗೆದ್ದಿದ್ದಾರೆ.
ರಶ್ಮಿಕಾ ಮಂದಣ್ಣ ಹುಟ್ಟಿದ್ದು 5 ಏಪ್ರಿಲ್ 1996 ರಲ್ಲಿ. ಇವರ ತಂದೆ-ತಾಯಿ ಮತ್ತು ತಂಗಿ ಕೊಡಗಿನಲ್ಲೇ ವಾಸಿಸುತ್ತಿದ್ದಾರೆ. ಅವರ ಹೆಸರು ಸುಮನ್ ಮಂದಣ್ಣ ಮತ್ತು ಮದನ್ ಮಂದಣ್ಣ. ಸಹೋದರಿ ಹೆಸರು ಶಿಮನ್ ಮಂದಣ್ಣ.
ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ, ನಾಲ್ಕು SIIMA ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ (2016) ಸಿನಿಮಾದ ಮೂಲಕ ನಟನೆ ಪ್ರಾರಂಭಿಸಿದ ರಶ್ಮಿಕಾ, ಅದಾದ ಬಳಿಕ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ವಿರಾಜಪೇಟೆಯಲ್ಲಿ ಕಾಫಿ ಎಸ್ಟೇಟ್ ಮತ್ತು ಸೆರಿನಿಟಿ ಎಂಬ ಫಂಕ್ಷನ್ ಹಾಲ್ ಹೊಂದಿದ್ದಾರೆ. ಇನ್ನು ತಾಯಿ ಸುಮನ್ ಮಂದಣ್ಣ ಗೃಹಿಣಿ.