ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

Wed, 15 May 2024-4:04 pm,

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಇದೀಗ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಸಾಧಿಸುತ್ತಿರುವ ತಾರೆ ರಶ್ಮಿಕಾ ಮಂದಣ್ಣ. ಸದ್ಯ ಬಾಲಿವುಡ್‌’ನಲ್ಲಿ ಸದ್ದು ಮಾಡುತ್ತಿರುವ ಈ ನಟಿ, ಸಲ್ಮಾನ್ ಖಾನ್ ಜೊತೆ ನಟಿಸುವ ಅದ್ಭುತ ಅವಕಾಶ ಪಡೆದುಕೊಂಡಿದ್ದಾರೆ

ಎಆರ್ ಮುರುಗದಾಸ್ ನಿರ್ದೇಶನದ, ಸಿಕಂದರ್ ಸಿನಿಮಾ ಈಗಾಗಲೇ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಈದ್ 2025 ರಂದು ತೆರೆಗೆ ಬರಲು ಸಿದ್ಧವಾಗಿದೆ.

ಅಂದಹಾಗೆ ಈ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಜೆಟ್ ಸಿನಿಮಾ ಮಾತ್ರವಲ್ಲದೆ, ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ ರಶ್ಮಿಕಾ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು.

ಸಿಕಂದರ್ ಜೊತೆಗೆ, ರಶ್ಮಿಕಾ ಮಂದಣ್ಣ ಹಲವಾರು ಪ್ರಾಜೆಕ್ಟ್’ಗಳಿಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link