‘ಅಪ್ಪಂದಿರ ದಿನ’ಕ್ಕೆ ರಶ್ಮಿಕಾ ಮಂದಣ್ಣ ಸ್ಪೆಷಲ್ ಪೋಸ್ಟ್: ನ್ಯಾಶನಲ್ ಕ್ರಶ್ ತಂದೆ ಹೇಗಿದ್ದಾರೆ? ಅವರ ವೃತ್ತಿಯೇನು ಗೊತ್ತಾ?
ಇಂದು ಫಾದರ್ಸ್ ಡೇ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ತಂದೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಶುಭಕೋರುತ್ತಿದ್ದಾರೆ.
ಅಂತೆಯೇ ನಟಿ ರಶ್ಮಿಕಾ ಮಂದಣ್ಣ ಸಹ ತಮ್ಮ ತಂದೆಯ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
ತಂದೆ ತಾಯಿ ಇಬ್ಬರ ಫೋಟೋ ಶೇರ್ ಮಾಡಿಕೊಂಡಿದ್ದು, “ಹ್ಯಾಪಿ ಫಾದರ್ಸ್ ಡೇ ಪಾ, ಐ ಲವ್ ಯೂ” ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ರಶ್ಮಿಕಾ ಅವರ ತಂದೆ ಹೆಸರು ಮದನ್ ಮಂದಣ್ಣ. ಇವರು ವಿರಾಜಪೇಟೆಯಲ್ಲಿ ಕಾಫಿ ಎಸ್ಟೇಟ್ ಮತ್ತು ಸೆರಿನಿಟಿ ಎಂಬ ಫಂಕ್ಷನ್ ಹಾಲ್ ಹೊಂದಿದ್ದಾರೆ. ತಾಯಿ ಸುಮನ್ ಮಂದಣ್ಣ ಗೃಹಿಣಿ.
ರಶ್ಮಿಕಾ ಮಂದಣ್ಣ ಹುಟ್ಟಿದ್ದು 5 ಏಪ್ರಿಲ್ 1996 ರಲ್ಲಿ. ಇವರ ತಂದೆ-ತಾಯಿ ಮತ್ತು ತಂಗಿ ಕೊಡಗಿನಲ್ಲೇ ವಾಸಿಸುತ್ತಿದ್ದಾರೆ. ರಶ್ಮಿಕಾ ಸಹೋದರಿ ಹೆಸರು ಶಿಮನ್ ಮಂದಣ್ಣ.
ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ, ನಾಲ್ಕು SIIMA ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ (2016) ಸಿನಿಮಾದ ಮೂಲಕ ನಟನೆ ಪ್ರಾರಂಭಿಸಿದ ರಶ್ಮಿಕಾ, ಅದಾದ ಬಳಿಕ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.