6 ಜನರ ಜೊತೆ ಲವ್, 2 ಮದುವೆ.. ಆದರೂ 69 ವರ್ಷ ಒಂಟಿ ಜೀವನ ಕಳೆದ ಬಿಟೌನ್ ಖ್ಯಾತ ನಟಿ!
ಇಂದಿಗೂ ನಟಿ ರೇಖಾ ಅವರ ಲವ್ ಸ್ಟೋರಿ ಜನರ ನಡುವೆ ಹರಿದಾಡುತ್ತವೆ. ವರದಿಗಳ ಪ್ರಕಾರ, ರೇಖಾ ಅವರ ಹೆಸರು 6 ನಟರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎನ್ನಲಾಗುತ್ತದೆ.
ನಟಿ ರೇಖಾ ಎರಡು ಬಾರಿ ವಿವಾಹವಾದರು ಎನ್ನಲಾಗುತ್ತದೆ. ಇಷ್ಟೆಲ್ಲಾ ಇದ್ದರೂ 69 ರ ಹರೆಯದಲ್ಲೂ ರೇಖಾ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ರೇಖಾ ಹೆಸರು ಮೊದಲು ನಟ ನವೀನ್ ನಿಶ್ಚಲ್ ಜೊತೆ ಸೇರಿಕೊಂಡಿತ್ತು. ಆದರೆ ಶೀಘ್ರದಲ್ಲೇ ಸಂಬಂಧ ಮುರಿದು ಬಿತ್ತು.
ನವೀನ್ ನಿಶ್ಚಲ್ ನಂತರ ರೇಖಾಳ ಜೀವನಕ್ಕೆ ಜಿತೇಂದ್ರ ಎಂಟ್ರಿ ಆಯಿತು. ಇಬ್ಬರೂ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಜಿತೇಂದ್ರ ಅವರು ಈ ಸಂಬಂಧದ ಬಗ್ಗೆ ಗಂಭೀರವಾಗಿರಲಿಲ್ಲ, ಬದಲಿಗೆ ಅವರು ಈಗಾಗಲೇ ಶೋಭಾ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ರೇಖಾ ಅವರ ಜೀವನದ ಅತ್ಯಂತ ಪ್ರಸಿದ್ಧ ಸಂಬಂಧ ವಿನೋದ್ ಮೆಹ್ರಾ ಜೊತೆಗಿನದ್ದು ಎನ್ನಲಾಗಿದೆ. ಇಬ್ಬರೂ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ವಿನೋದ್ ಮೆಹ್ರಾ ಅವರ ತಾಯಿ ರೇಖಾಳನ್ನು ಮನೆಯಿಂದ ಹೊರಗೆ ಹಾಕಿದರು ಮತ್ತು ಕಪಾಳಮೋಕ್ಷ ಮಾಡಿದರು ಎನ್ನಲಾಗುತ್ತದೆ. ಆದರೆ ಈ ಸಂಬಂಧದ ಸಂಗತಿಯನ್ನು ಇಬ್ಬರೂ ವಿರೋಧಿಸುತ್ತಲೇ ಬಂದಿದ್ದಾರೆ.
ರೇಖಾ ಹೆಸರು ಅಮಿತಾಬ್ ಬಚ್ಚನ್ ಜೊತೆ ತಳುಕು ಹಾಕಿಕೊಂಡಿತು. 10 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಅಮಿತಾಬ್ ಜಯಾ ಭಾದುರಿ ಅವರನ್ನು ಮದುವೆಯಾಗಿದ್ದರು. ಅಮಿತಾಬ್ ಕೂಲಿ ಸೆಟ್ ನಲ್ಲಿ ಗಾಯಗೊಂಡು ಕೋಮಾಕ್ಕೆ ಹೋದಾಗ, ರೇಖಾ ಅವರನ್ನು ಭೇಟಿಯಾಗಲು ಸಹ ಜಯಾ ಬಿಡಲಿಲ್ಲ. ಈ ಸಂಬಂಧ ಇಲ್ಲಿಗೇ ಮುಗಿಯಿತು.
ಸ್ಮಿತಾ ಪಾಟೀಲ್ ನಿಧನದ ನಂತರ ರಾಜ್ ಬಬ್ಬರ್ ಮೊದಲ ಹೆಂಡತಿ ಮತ್ತು ಮಕ್ಕಳ ಬಳಿಗೆ ಮರಳಿದಾಗ, ಕುಟುಂಬದಿಂದ ಮೊದಲಿನಂತೆ ಪ್ರೀತಿ ಸಿಗಲಿಲ್ಲ. ಅದೇ ಸಮಯದಲ್ಲಿ ರಾಜ್ ಬಬ್ಬರ್ ಜೊತೆ ರೇಖಾ ಆಪ್ತತೆ ಹೆಚ್ಚಾಯಿತು ಎನ್ನಲಾಗಿದೆ. ರೇಖಾ - ರಾಜ್ ಬಬ್ಬರ್ ಸಂಬಂಧವೂ ಅರ್ಧಕ್ಕೆ ಮುರಿದು ಬಿತ್ತು.
ಮುಖೇಶ್ ಅಗರ್ವಾಲ್ ಅವರನ್ನು ರೇಖಾ ಮದುವೆ ಆದರು. ಈ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತು. ಆದರೆ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ ಮುಖೇಶ್ ರೇಖಾಳ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಮುಖೇಶ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.