2 ವಿವಾಹವಾದ ನಟನೊಂದಿಗೆ ಸಂಬಂಧ, ಮದುವೆಯಾಗದೆ 2 ಮಕ್ಕಳ ತಾಯಿಯಾದ ಖ್ಯಾತ ನಟಿ! ಈಕೆಯ ಮಗಳು 100 ಕೋಟಿ ಸಂಭಾವನೆ ಪಡೆದ ಮೊದಲ ನಾಯಕನಟಿ!!
ಹೇಮಾ ಮಾಲಿನಿ, ರೇಖಾ, ವೈಜಯಂತಿ ಮಾಲಾ, ಜಯಪ್ರದಾ ಮತ್ತು ಶ್ರೀದೇವಿ ಬಾಲಿವುಡ್ʼಗೆ ಪ್ರವೇಶಿಸುವ ಮೊದಲು ದಕ್ಷಿಣ ಚಿತ್ರರಂಗದಲ್ಲಿ ಕೆಲಸ ಮಾಡಿದವರು. ಸೌತ್ ಸಿನಿಮಾದಿಂದ ಬಾಲಿವುಡ್ʼಗೆ ಬಂದು ದೇಶಾದ್ಯಂತ ಜನರ ಹೃದಯದಲ್ಲಿ ನೆಲೆಯೂರಿದವರು. ಇನ್ನು ನಟಿ ರೇಖಾ ಅವರ ತಾಯಿ ಕೂಡ ನಟಿಯಾಗಿದ್ದರು.
ರೇಖಾ ಅವರ ತಾಯಿ ಪುಷ್ಪವಲ್ಲಿ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಪರದೆಯ ಮೇಲೆ ಸೀತೆಯ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾಗಿದ್ದರು. 1936 ರಲ್ಲಿ ಬಿಡುಗಡೆಯಾದ ಚಲನಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ ಅವರು, ಅದಕ್ಕಾಗಿ ಪಡೆದ ಸಂಭಾವನೆ 300 ರೂ.
ಈ ಪಾತ್ರದ ನಂತರ, ಅವರಿಗೆ ಅನೇಕ ಚಿತ್ರಗಳ ಆಫರ್ʼಗಳು ಬರಲಾರಂಭಿಸಿದವು. ಇನ್ನು ಪುಷ್ಪವಲ್ಲಿ ಸಿನಿಮಾಗಳ ಹೊರತಾಗಿ ಸುದ್ದಿಯಾಗಿದ್ದು ಮದುವೆ ವಿಚಾರಕ್ಕೆ. 1940 ರಲ್ಲಿ ವಿವಾಹವಾಗಿದ್ದ ಅವರು, ಕೇವಲ ಆರು ವರ್ಷಗಳ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.
ಅದೇ ಸಂದರ್ಭದಲ್ಲಿ ನಟ ಜೆಮಿನಿ ಗಣೇಶನ್ ಅವರೊಂದಿಗೆ ‘ಮಿಸ್ ಮಾಲಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪುಷ್ಪವಲ್ಲಿಗೆ ಜೀವನದಲ್ಲಿ ಹೊಸ ತಿರುವು ಸಿಕ್ಕಂತಾಯಿತು. ರೇಖಾ ಅವರ ತಾಯಿ ಜೆಮಿನಿ ಗಣೇಶನ್ ಅವರನ್ನು ಪ್ರೀತಿಸುತ್ತಿದ್ದರು, ಆದರೆ ನಟ ಈ ಹಿಂದೆ ಮದುವೆಯಾಗಿದ್ದರು.
ಜೆಮಿನಿ ಗಣೇಶನ್ ಎಂದಿಗೂ ಪುಷ್ಪವಲ್ಲಿಗೆ ತನ್ನ ಹೆಂಡತಿಯ ಸ್ಥಾನಮಾನವನ್ನು ನೀಡಲಿಲ್ಲ, ಆದರೆ ರೇಖಾ ಅವರ ತಾಯಿ ತನ್ನ ಇಡೀ ಜೀವನವನ್ನು ಆಕೆಯ ಪ್ರೇಯಸಿಯಾಗಿ ಕಳೆದರು. ಮದುವೆಯಾಗದೆ ಜೆಮಿನಿ ಗಣೇಶನ್ ಅವರ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು. ಅವರಲ್ಲಿ ಒಬ್ಬರು ಪ್ರಸಿದ್ಧ ನಟಿ ರೇಖಾ.
ರೇಖಾ ಅವರ ತಾಯಿ ಪುಷ್ಪವಲ್ಲಿ 1991 ರಲ್ಲಿ ಕೊನೆಯುಸಿರೆಳೆದರು. ಇನ್ನು ತನ್ನಂತೆಯೇ ಮಗಳು ರೇಖಾ ಕೂಡ ಸಿನಿಮಾಗಳಲ್ಲಿ ಹೆಸರು ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು.
ರೇಖಾ ಮೊದಲ ಬಾರಿಗೆ ತೆಲುಗು ಚಿತ್ರ 'ರಂಗುಲ ರತ್ನಂ' ನಲ್ಲಿ ಕಾಣಿಸಿಕೊಂಡರು. ಆಗ ಅವರ ವಯಸ್ಸು ಕೇವಲ 12 ವರ್ಷ. 15 ನೇ ವಯಸ್ಸಿನಲ್ಲಿ, ಮೊದಲ ಬಾಲಿವುಡ್ ಚಿತ್ರ 'ಅಂಜನಾ ಸಫರ್' ನಲ್ಲಿ ಕೆಲಸ ಮಾಡಿದರು