ಅರೇ ಈ ಸ್ಟಾರ್‌ ನಟಿ ಡಾಕ್ಟರ್..? ಸಿನಿಮಾಗಳಲ್ಲಿ ಗ್ಲಾಮರ್ ಕ್ವೀನ್‌, ಅದ್ಭುತ ನಟಿ.. ಹೊರಗೆ ವೈದ್ಯೆ... ಸೂಪರ್‌...

Sun, 20 Oct 2024-3:47 pm,

ಚಿತ್ರರಂಗದ ಹಲವು ನಾಯಕಿಯರು ಡಾಕ್ಟರ್ ಆಗಬೇಕು ಎಂಬ ಆಸೆಯಿಂದ ನಟನಾದೆವು ಎನ್ನುತ್ತಾರೆ.. ಆದರೆ ಕೆಲವರು ಒಂದೆಡೆ ಎಂಬಿಬಿಎಸ್ ಓದಿ ಮತ್ತೊಂದೆಡೆ ನಾಯಕಿಯಾಗಿ ಮುಂದುವರಿಯುತ್ತಿದ್ದಾರೆ.   

ತಮ್ಮ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದೂ.. ಸಾಯಿ ಪಲ್ಲವಿ, ಐಶ್ವರ್ಯ ಲಕ್ಷ್ಮಿ, ಶ್ರೀಲೀಲಾ, ಆಶಿಕಾ ರಂಗನಾಥ್, ಶ್ರೀಲೀಲಾ ಮುಂತಾದ ಸ್ಟಾರ್ ನಾಯಕಿಯರು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.   

ಈ ಪೈಕಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ತನಗೊಂದು ಇಮೇಜ್ ಕ್ರಿಯೇಟ್ ಮಾಡುತ್ತಿರುವ ಈ ನಾಯಕಿಯೂ ಡಾಕ್ಟರ್. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋವನ್ನು ನೋಡಿ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.   

ಈ ನಟಿ ವೈದ್ಯೆ..? ಅಂತ ಶಾಕ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆ ಸುಂದರಿ ಯಾರು ಗೊತ್ತಾ?.. ಯಸ್‌ ಆಕೆ ಬೇರೆ ಯಾರೂ ಅಲ್ಲ.. ತೆಲುಗು ಚಿತ್ರನಟಿ.. ಡಾ. ಸಾಯಿ ಕಾಮಾಕ್ಷಿ ಭಾಸ್ಕರ್ಲಾ.. ತೆಲುಗು ಚಿತ್ರರಂಗದ ಹೆಸರಾಂತ ನಟಿಯಲ್ಲಿ ಒಬ್ಬರು.  

ಸಾಯಿ ಕಾಮಾಕ್ಷಿ ಭಾಸ್ಕರ್ ತೆಲುಗು ಸುಂದರಿ... ಚೀನಾದಲ್ಲಿ ಎಂಬಿಬಿಎಸ್ ಮಾಡಿದ ನಂತರ ಕೆಲವು ವರ್ಷಗಳ ಕಾಲ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡಿದಳು. 2018 ರಲ್ಲಿ ಮಿಸ್‌ ತೆಲಂಗಾಣ ಪಟ್ಟ ಪಡೆದ ನಂತರ, ಈಕೆಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದವು.   

ಪ್ರಿಯುರಾಲು ಚಿತ್ರದ ಮೂಲಕ ತೆಲುಗು ತೆರೆಗೆ ನಾಯಕಿಯಾಗಿ ಪರಿಚಯವಾದ ಈ ಚೆಲುವೆ, ನಂತರ ʼಮಾ ಉರಿ ಪೊಲಿಮೆರʼ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇಟ್ಲು ಮರೆದುಮಿಲ್ಲಿ ಪ್ರಜನಿಕಂ, ವಿರೂಪಾಕ್ಷ, ಪೊಲಿಮೆರ 2, ಓಂ ಭೀಮ್ ಬುಷ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.   

ಸಾಯಿ ಕಾಮಾಕ್ಷಿ ಅವರು ನಟನೆಗೆ ಸ್ಕೋಪ್ ಇರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಝಾನ್ಸಿ, ಸೈತಾನ್, ದೂತಾ ಮುಂತಾದ ವೆಬ್ ಸಿರೀಸ್‌ನಲ್ಲಿ ನಟಿಸುವ ಮೂಲಕ ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಿದರು..   

ಈ ನಟಿ ಹೆಚ್ಚಾಗಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಹಾಟ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾರೆ. ಇತ್ತೀಚೆಗಷ್ಟೇ ಈ ಬ್ಯೂಟಿ ಫೋಟೋಗಳು ವೈರಲ್ ಆಗಿದ್ದವು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link