ನಟಿ ಸಾಯಿ ಪಲ್ಲವಿ ಕೂದಲು ಕಡುಕಪ್ಪಾಗಿ ಉದ್ದವಾಗಿ ಬೆಳೆಯಲು ಕಾರಣ ಈ ಎಲೆಯ ರಸವಂತೆ! ಸ್ವತಃ ಅವರೇ ಹೇಳಿದ ಟಿಪ್ಸ್ ಇದು
ಆನ್-ಸ್ಕ್ರೀನ್ ಅಥವಾ ಆಫ್-ಸ್ಕ್ರೀನ್… ತನ್ನ ವ್ಯಕ್ತಿತ್ವದಿಂದಲೇ ದಕ್ಷಿಣ ಭಾರತದ ಪ್ರೇಕ್ಷಕರ ಮನಗೆದ್ದ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು, ಮೇಕಪ್ ಇಲ್ಲದೆ, ಪಿಂಪಲ್ ಫೇಸ್ ಇಟ್ಟುಕೊಂಡೇ ಸಿನಿಪ್ರಿಯರ ಮನಗೆದ್ದ ಏಕೈಕ ನಟಿ ಸಾಯಿ ಪಲ್ಲವಿ ಎಂದರೆ ತಪ್ಪಾಗಲ್ಲ.
ಮಲಯಾಳಂ ಸಿನಿಮಾ ‘ಮಲರ್’ ಮೂಲಕ ಸಿನಿರಂಗಕ್ಕೆ ಪ್ರವೇಶ ಪಡೆದ ಈ ನಟಿ ತನ್ನ ಸರಳತೆಯಿಂದ ಅನೇಕರ ಮನಗೆದ್ದಿದ್ದಾರೆ.
ಯಾವುದೇ ಮೇಕಪ್ ಲುಕ್ ಇಲ್ಲದೆ, ಪರದೆಯ ಮೇಲೆ ಮಿಂಚಿರುವ ನಟಿ ಸಾಯಿ ಪಲ್ಲವಿ ಕೂದಲು ಕೂಡ ಅನೇಕರಿಗೆ ಹಿಡಿಸಿದೆ. ಅಂದಹಾಗೆ ತಮ್ಮ ಹೇರ್ ಕೇರ್ ರುಟೀನ್ ಬಗ್ಗೆ ಸ್ವತಃ ಅವರೇ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
"ಸೌಂದರ್ಯ ಎಂಬುದು ನೀವು ಯಾರು ಮತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಇರುತ್ತದೆ" ಎಂದು ಸಾಯಿಪಲ್ಲವಿ ಹೇಳುತ್ತಾರೆ.
ಉದ್ದನೆಯ ಮತ್ತು ಗುಂಗುರು ಕೂದಲಿನ ಹಿಂದಿನ ರಹಸ್ಯವೆಂದರೆ ಆರೋಗ್ಯಕರ ಆಹಾರ. ಇದರ ಹೊರತಾಗಿ ದುಬಾರಿ ಉತ್ಪನ್ನಗಳು ಮತ್ತು ಪಾರ್ಲರ್ ಸೆಷನ್’ಗಳ ಬಗ್ಗೆ ನಟಿಗೆ ನಂಬಿಕೆ ಇಲ್ಲವಂತೆ.
ತನ್ನ ಹೊಳೆಯುವ ಮತ್ತು ಉದ್ದನೆಯ ಕೂದಲಿನ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ ಅವರು, "ನಾನು ಆರೋಗ್ಯಕರ ಆಹಾರವನ್ನು ಸೇವಿಸುತ್ತೇನೆ. ಜೊತೆಗೆ ಕೂದಲನ್ನು ಮೂರು ದಿನಕ್ಕೊಮ್ಮೆ ತೊಳೆಯುತ್ತೇನೆ. ನನ್ನ ಕೂದಲು ಉದುರಬಾರದು ಎಂದು ಅಲೋವೆರಾದಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತೇನೆ” ಎಂದು ಹೇಳಿದ್ದಾರೆ.
ನಟಿ ಸಾಯಿ ಪಲ್ಲವಿ ಸಹಜವಾದ ಗುಂಗುರು ಕೂದಲು ಮತ್ತು ಯಾವುದೇ ಮೇಕಪ್ ಇಲ್ಲದ ಆಕೆ ಮುಖಚರ್ಯೆ ಅನೇಕರಿಗೆ ಇಷ್ಟವಾಗಿದೆ.
"ಸಿನಿಮಾಗಳಲ್ಲಿ ಕೆಲಸ ಮಾಡುವಾಗ ನನ್ನ ಮುಖದಲ್ಲಿ ಸಾಕಷ್ಟು ಮೊಡವೆಗಳಿದ್ದವು, ಆದರೆ ಜನರು ನಾನು ಹೇಗಿದ್ದೇನೋ ಹಾಗೆಯೇ ನನ್ನನ್ನು ಸ್ವೀಕರಿಸಿದರು. ಎಲ್ಲಕ್ಕಿಂತ ಮುಖ್ಯವಾದ ಮತ್ತು ನಿಜವಾದ ಸೌಂದರ್ಯ ಎಂದರೆ ಆತ್ಮವಿಶ್ವಾಸ ಎಂದು ನಾನು ಕಲಿತಿದ್ದೇನೆ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.