ನಾಗಚೈತನ್ಯ ಮದುವೆ ಅನೌನ್ಸ್‌ ಬೆನ್ನಲ್ಲೇ ಹೊಸ ಬಾಯ್‌ಫ್ರೆಂಡ್‌ ಪರಿಚಯಿಸಿದ ಸಮಂತಾ! ಖ್ಯಾತ ನಟನೊಂದಿಗೆ ಸ್ಯಾಮ್‌ ಸೆಕೆಂಡ್ ಮ್ಯಾರೇಜ್‌ ಫಿಕ್ಸ್?!‌

Sun, 24 Nov 2024-6:28 pm,

ನಟಿ ಸಮಂತಾ ದೂರವಾದ ಬಳಿಕ ನಾಗಚೈತನ್ಯ ಶೋಭಿತಾ ಧೂಳೀಫಾಲ ಅವರೊಂದಿಗೆ ಡೇಟಿಂಗ್‌ ಮಾಡಿ ಸದ್ಯ ಮದುವೆಗೂ ಸಜ್ಜಾಗಿದ್ದಾರೆ.. ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್‌ ಕೂಡ ಮಾಡಿಕೊಂಡಿದ್ದರು.. ಇದೀಗ ನಟಿ ಸಮಂತಾ ಕೂಡ ಮತ್ತೇ ಲವ್‌ನಲ್ಲಿ ಬಿದದಿದ್ದಾರೆ ಎನ್ನುವ ವದಂತಿಗಳು ಜೋರಾಗಿವೆ..  

ಹೌದು.. ಬಾಲಿವುಡ್‌ನ ಸ್ಟಾರ್‌ ನಟನೊಬ್ಬ ನಟಿ ಸಮಂತಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಅವರೂ ಬೇರಾರೂ ಅಲ್ಲ.. ಮಲೈಕಾ ಅರೋರಾ ಮಾಜಿ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್..‌  ಈತ ಹಾಗೂ ಸಮಂತಾ ಒಟ್ಟಿಗೆ ಕೆಲಸ ಮಾಡಿಲ್ಲ.. ಆದರೂ ಅವರಿಬ್ಬರ ಮದುವೆ ವದಂತಿಗಳು ಜೋರಾಗಿಯೇ ಹಬ್ಬುತ್ತಿವೆ.. ಹಾಗಾದರೇ ಇದಕ್ಕೆ ಕಾರಣವೇನು?  

ಇದಕ್ಕೆಲ್ಲ ಕಾರಣ ನಟ ಅರ್ಜುನ್‌ ಮಾಡಿದ ಪೋಸ್ಟ್..‌ ಹೌದು ನಟಿ ಸಮಂತಾ ಕವಿತೆಯೊಂದನ್ನು ಪೋಸ್ಟ್‌ ಮಾಡಿಕೊಂಡಿದ್ದರು.. ಇದಕ್ಕೆ ಅರ್ಜುನ್‌ ಕಪೂರ್‌ ಪ್ರತಿಕ್ರಿಯಿಸಿದ್ದು, ಇದು ಇನ್ಸಪೀರೇಷನ್‌ ಎಂದು ಹೊಗಳಿದ್ದಾರೆ.. ಇದರ ಬಳಿಕವೇ ಈ ರೀತಿಯ ವದಂತಿಗಳು ಸೃಷ್ಟಿಯಾಗುತ್ತಿವೆ.. ಅಲ್ಲದೇ ಅರ್ಜುನ್‌ ಕಪೂರ್‌ ಗುಟ್ಟಾಗಿ ಸಮಂತಾ ಜೊತೆ ಲವ್‌ನಲ್ಲಿ ಬಿದ್ದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ..   

ಆದರೆ ಈ ವದಂತಿಗಳಿಗೆ ಅರ್ಜುನ್‌ ಆಗಲಿ ಸಮಂತಾ ಆಗಲಿ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.. ಇನ್ನು ನಟಿ ಸಮಂತಾ ಸದ್ಯ ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ತಮ್ಮದೇ ಚಾಪು ಮೂಡಿಸುವಲ್ಲಿ ನಿರತರಾಗಿದ್ದಾರೆ.. ಅಲ್ಲದೇ ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ..  

ಸಮಂತಾ 1987ರ ಎಪ್ರಿಲ್ 28ರಂದು ಚೆನೈನಲ್ಲಿ ಜನಿಸಿದರು.. ಸದ್ಯ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ಸ್ಯಾಮ್‌ ಪದವಿ ಓದುವಾಗಲೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು.. ಬಳಿಕ  2010ರಲ್ಲಿ ರಿಲೀಸ್‌ ಆದ ಯೇ ಮಾಯಾ ಚೇಸಾವೆ ಸಿನಿಮಾದಿಂದ ಸಿನಿರಂಗಕ್ಕೆ ಕಾಲಿಟ್ಟರು..  

ಬಳಿಕ ತಮಿಳು ಚಿತ್ರರಂಗದಲ್ಲೂ ಮಿಂಚಲು ಶುರುಮಾಡಿದರು.. ಈಗಾಗಲೇ ಸಮಂತಾ ಹಲವಾರು ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆದು ಸಿನಿರಂಗದಲ್ಲೇ ಟಾಪ್‌ ನಟಿ ಎನಿಸಿಕೊಂಡಿದ್ದಾರೆ.. ನಟಿ ಸಮಂತಾ ಸಿನಿಜೀವನದಲ್ಲಿ ಕಂಡ ಯಶಸ್ಸು ಅವರು ವೈಯಕ್ತಿಕ ಜೀವನದಲ್ಲಿ ಲಭ್ಯವಾಗಲಿಲ್ಲವೆಂಬುದೇ ಅಭಿಮಾನಿಗಳ ಬೇಸರ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link