ಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆಗೀಡಾದ್ದಾರೆ ಸಮಂತಾ! ಸ್ಟಾರ್ ನಟಿಯ ಬಾಳಲ್ಲಿ ಹೀಗ್ಯಾಕಾಗ್ತಿದೆ? ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ..!!
ನಟಿ ಸಮಂತಾ ವಿಚ್ಛೇದನ ಪಡೆದಿದ್ದು, ಅವರ ಮಾಜಿ ಪತಿ ನಾಗ ಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಅವರನ್ನು ಮದುವೆಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಡಿವೋರ್ಸ್ ಆದ ಸಂದರ್ಭದಲ್ಲಿ ಸಮಂತ ತೀರಾ ಕುಗ್ಗಿದವರಂತೆ ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ, ಸಿನಿಮಾ ಪ್ರಚಾರವೊಂದಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವೇದಿಕೆ ಮೇಲೆ ಆಕೆ ಕಣ್ಣೀರು ಸುರಿಸಿದ್ದರು. ಇದಕ್ಕೆ ಸಂಬಂಧಿಸಿ ಅನೇಕ ವಿಡಿಯೋ-ಫೋಟೋಗಳು ಎಲ್ಲೆಡೆ ಹರಿದಾಡಿತ್ತು.
ಇನ್ನು ಹೀಗೆ ಅಳಲು ಕಾರಣ ಏನೆಂಬುದನ್ನು ಸ್ವತಃ ಸಮಂತಾ ಅವರೇ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಪತಿಯಿಂದ ಬೇರ್ಪಟ್ಟು ವರ್ಷಗಳಾದ ನಂತರವೂ ಸಮಂತಾ ಭಾಗವಹಿಸುವ ಪ್ರತಿಯೊಂದು ಸಮಾರಂಭದಲ್ಲಿ ಕಣ್ಣೀರು ಸುರಿಸುತ್ತಾರೆ. ಆದರೆ ಅದಕ್ಕೆ ಕಾರಣ ನಾಗಚೈತನ್ಯ ಆಗಲಿ, ಆಕೆ ದುಃಖವಾಗಲಿ ಅಲ್ಲ... ಬದಲಾಗಿ ಆರೋಗ್ಯ ಸಮಸ್ಯೆ.
ಸಮಂತಾ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಹೋರಾಟಗಳ ಬಗ್ಗೆ ಮೌನ ಮುರಿದಿದ್ದರು. ಪ್ರಸ್ತುತ ಸನ್ನಿವೇಶಗಳು, ವೈಯಕ್ತಿಕ ಒತ್ತಡಗಳು, ಆರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಹಿಂದಿನ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
ಸ್ಟೇಜ್ ಕಾರ್ಯಕ್ರಮಗಳಲ್ಲಿ ನೀವೇಕೆ ಅಳುತ್ತೀರಿ ಎಂದು ಸಂದರ್ಶನದಲ್ಲಿ ಪ್ರಶ್ನೆ ಮಾಡಿದಾಗ, "ನೀವು ಈ ಪ್ರಶ್ನೆ ಕೇಳಿದ್ದು ತುಂಬಾ ಒಳ್ಳೆಯದಾಯಿತು. ಯಾಕಂದ್ರೆ ಅನೇಕರು ನಾನು ಕಣ್ಣೀರು ಹಾಕುತ್ತಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ ಅದಕ್ಕೆ ಕಾರಣ ಬೇರೆಯೇ ಇದೆ. ನನಗೆ ಬೆಳಕಿನ ಸೂಕ್ಷ್ಮತೆ ಹೆಚ್ಚಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಕಣ್ಣಿಗೆ ಹೆಚ್ಚಾಗಿ ಬೆಳಕು ಬಿದ್ದಾಗ ಕಣ್ಣೀರು ಬರುತ್ತದೆ" ಎಂದಿದ್ದಾರೆ.
"ಒಂದು ಮಿತಿಗಿಂತ ಹೆಚ್ಚು ಬೆಳಕು ಕಣ್ಣಿಗೆ ಬಿದ್ದರೆ ನನಗೆ ಕಣ್ಣೀರು ಬರುತ್ತದೆ. ಅದನ್ನು ಕಂಡ ಅನೇಕರು, ನಾನು ನೋವಿನಿಂದ ಅಳುತ್ತಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ ಅದು ಹಾಗಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಈ ಹಿಂದೆ ಸಮಂತಾಗೆ ಮಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡಿತ್ತು. ಜೊತೆಗೆ ಒಂದು ಹಂತದಲ್ಲಿ ಮಧುಮೇಹದ ವಿರುದ್ಧವೂ ಹೋರಾಡಿದ್ದರು ಈ ನಟಿ. ಆದರೆ ಈಗ ʼಲಘು ಸೂಕ್ಷ್ಮತೆʼ ಸಮಸ್ಯೆಯನ್ನೂ ಸಹ ಎದುರಿಸುತ್ತಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇನ್ನು ಉತ್ತಮ ಆಹಾರ ಕ್ರಮ ಅನುಸರಿಸಿದ್ದ ಸಮಂತಾ ಮಧುಮೇಹವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.