ಸಮಂತಾ 10 ನೇ ತರಗತಿಯ ಅಂಕಪಟ್ಟಿ ವೈರಲ್‌! ನಟಿ SSLC ಅಲ್ಲಿ ಪಡೆದ ಅಂಕ ಎಷ್ಟು ಗೊತ್ತಾ?

Wed, 04 Sep 2024-7:12 am,

ನಟಿ ಸಮಂತಾ ತನ್ನ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತನ್ನ ವೈಯಕ್ತಿಕ ಜೀವನದ ಕುರಿತು ಕೂಡ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಹೀಗುರುವಾಗ ನಟಿಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಇನ್ಸ್ಟಾಗ್ರಾಂ ಅಕೌಂಟ್‌ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿರುವ ಸಮಂತಾ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಾ ನಟನೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಕ್ಯೂಟ್‌ ಬ್ಯೂಟಿ ಹುಡುಗರ ಕನಸಿನ ಕನ್ಯೆ ಅಂತಲೇ ಹೇಳಬಹುದು.  

ಆದರೆ ಸಮಂತಾ ಕೇವಲ ನಟನೆಯಲ್ಲಿ ಮಾತ್ರವಲ್ಲ, ಅಧ್ಯಯನದಲ್ಲಿಯೂ ಉತ್ತಮ. ಸಮಂತಾ ಯಾವುದೇ ಪಾತ್ರವನ್ನು ಬಹಳ ಸುಲಭವಾಗಿ ಮಾಡುತ್ತಾರೆ. ಹಾಗೆಯೇ ವಿದ್ಯಾಭ್ಯಾಸದಲ್ಲೂ ನಟಿ ಬಾಲ್ಯದಲ್ಲಿ ಒಳ್ಳೆ ಅಂಕ ಗಳಿಸಿದ್ದಾರೆ. ಇತ್ತೀಚೆಗೆ ಸಮಂತಾ ಅವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವೈರಲ್‌ ಆಗಿದೆ.

ಸಮಂತಾ ವಿದ್ಯಾಭ್ಯಾಸದಲ್ಲೂ ಮಿಂಚಿದ್ದಾರೆ ಎನ್ನುವುದನ್ನು ಶಾಲೆ ಮತ್ತು ಕಾಲೇಜಿನಲ್ಲಿ ನೀಡಿದ ಪ್ರಗತಿ ವರದಿಗಳು ಸ್ಪಷ್ಟಪಡಿಸುತ್ತವೆ. ಸಮಂತಾ 10 ಮತ್ತು 11 ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಂದು ಮಾರ್ಕ್ ಲಿಸ್ಟ್ ವೈರಲ್ ಆಗಿದೆ.

ಇದು ಅರ್ಧವಾರ್ಷಿಕ ಪರೀಕ್ಷೆಯ ವರದಿ.. ಇಂಗ್ಲಿಷ್ ಮತ್ತು ತಮಿಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ 80 ಪ್ಲಸ್ ಮತ್ತು 90 ಪ್ಲಸ್ ಅಂಕಗಳು ಆದರೆ ಗಣಿತದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾಳೆ. 1000ಕ್ಕೆ 887 ಅಂಕಗಳೊಂದಿಗೆ ತರಗತಿಯಲ್ಲಿ ಪ್ರಥಮ ರ‍್ಯಾಂಕ್.

ಈ ಅಂಕಗಳನ್ನು ಕಂಡು ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ. ಈ ಬ್ಯೂಟಿ ನಟನೆಯ ಜೊತೆಗೆ ಸ್ಟಡೀಸ್‌ನಲ್ಲೂ ಸೂಪರ್ ಎಂದು ಹೊಗಳುತ್ತಿದ್ದಾರೆ.  

ಸದ್ಯ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಮಾರ್ಕ್ಸ್ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರೊಂದಿಗೆ ನೆಟ್ಟಿಗರು ಸಮಂತಾಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link