Saptami Gowda: ಸಪ್ತಮಿ ಗೌಡಗೂ ರಾಜ್ ಕುಟುಂಬಕ್ಕೂ ನಂಟೇನು? ಈ ದಿನ ಎಂದೂ ಮರೆಯಲಾರೆ ಅಂದಿದ್ಯಾಕೆ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಮೂಲಕ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.
ಯುವ ಸಿನಿಮಾದಲ್ಲಿ ನಟ ಯುವ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ. ಕನ್ನಡದ ಕಣ್ಮಣಿ ಅಣ್ಣಾವ್ರ ಮೊಮ್ಮಗನ ಜೊತೆ ಸಪ್ತಮಿ ನಟಿಸುತ್ತಿರುವುದು ಅವರಿಗೆ ವಿಶೇಷ ಖುಷಿ ನೀಡಿದೆ.
ಇದೀಗ ಸಪ್ತಮಿ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ ನಟಿ ಸಪ್ತಮಿ ಗೌಡ ತುಂಬಾ ಸಂತೋಷಗೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಕಳೆದ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಯುವ ಸಿನಿಮಾದಿಂದಾಗಿ ದೊಡ್ಮನೆ ಕುಟುಂಬ ಮತ್ತು ಸಪ್ತಮಿ ನಡುವೆ ಮಧುರ ಬಾಂಧವ್ಯ ಬೆಳೆದಿದೆ. ಇದೇ ಸಪ್ತಮಿ ಮತ್ತು ಅಣ್ಣಾವ್ರ ಮನೆಯ ನಡುವೆ ನಂಟನ್ನು ಬೆಸೆದಿದೆ.