ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆ
ಮಲಯಾಳಂ ನಟಿ ಶೀಲು ಅಬ್ರಹಾಂ ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದಿದ್ದಾರೆ.
ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಅನೇಕ ಜನರು ವಿವಾಹೇತರ ಸಂಬಂಧಗಳನ್ನು ಆಶ್ರಯಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶೀಲು ಅಬ್ರಹಾಂ, ಇವೆಲ್ಲವೂ ವ್ಯಕ್ತಿಯ ಸ್ವಾತಂತ್ರ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಾಚಾರ ತಪ್ಪು. ಆದರೆ ಸ್ವಂತ ಇಚ್ಛೆಯ ಮೇರೆಗೆ ಅವರೊಂದಿಗೆ ಸಂಬಂಧ ಬೆಳೆಸಿ. ಬಳಿಕ ಅದನ್ನು ಅತ್ಯಾಚಾರ ಎನ್ನುವುದು ತಪ್ಪು ಎಂದಿದ್ದಾರೆ.
ಪ್ರತಿಯೊಂದು ಸಮಸ್ಯೆಗಳನ್ನು ನಿವಾರಿಸಲು ಉತ್ತಮ ಮಾನಸಿಕ ಆರೋಗ್ಯವನ್ನು ಹುಡುಗಿಯರು ಹೊಂದಿರಬೇಕು. ಮಹಿಳೆಯರು ಜಾಗರೂಕರಾಗಿರಬೇಕು ಎಂದು ಯುಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೀಲು ಹೇಳಿದ್ದಾರೆ.