ಸ್ಟಾರ್‌ ನಟರಾಗಿದ್ದರೂ ʼಆʼ ಒಂದು ಕಾರಣಕ್ಕೆ ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಿಲ್ವಂತೆ ಶ್ರದ್ಧಾ ಕಪೂರ್!‌ ಅಷ್ಟಕ್ಕೂ ಏನದು?

Thu, 22 Aug 2024-2:20 pm,

ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಶ್ರದ್ಧಾ ಈ ಬಗ್ಗೆ ಮಾತನಾಡಿದ್ದಾರೆ... ಬಾಲಿವುಡ್ ನ ಮೂವರು ಖಾನ್ ಗಳ ಜತೆ ಕೆಲಸ ಮಾಡುವ ಅವಕಾಶ ಇನ್ನೂ ನನ್ನ ಮುಂದೆ ಬಂದಿಲ್ಲ ಎಂದಿದ್ದಾರೆ ನಟಿ.. ಈ ಹಿಂದೆ ಶಾರುಖ್, ಅಮೀರ್ ಅಥವಾ ಸಲ್ಮಾನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಬಂದರೂ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಶ್ರದ್ಧಾ ಹೇಳಿದ್ದಾರೆ..   

“ಒಂದೇ ರೀತಿಯ ಚಿತ್ರದ ಆಫರ್‌ಗಳು ಹಲವಾರು ಬಾರಿ ಬಂದಾಗ.. ಪಾತ್ರವು ಸರಿಯಾಗಿಲ್ಲ ಎಂದು ನಿಮಗೆ ಅನಿಸಿದಾಗ ಅಥವಾ ಪಾತ್ರವು ಕಲಾವಿದನಿಗೆ ಚಾಲೆಂಜಿಗ್‌ ಆಗಿಲ್ಲದಿದ್ದಾಗ ಆ ಸಿನಿಮಾವನ್ನು ಕೈ ಬಿಡುವುದು ಉತ್ತಮ. ನಾನು ಆಯ್ಕೆ ಮಾಡುವ ಕೆಲಸದ ಪ್ರಕಾರದ ಬಗ್ಗೆ ನಾನು ತುಂಬಾ ಚೂಸಿ ಆಗಿದ್ದೇನೆ..   

"ನಾನು ಒಳ್ಳೆಯ ಚಿತ್ರಗಳ ಭಾಗವಾಗಲು ಬಯಸುತ್ತೇನೆ.. ಒಳ್ಳೆಯ ಕಥೆಗಳನ್ನು ಹೊಂದಿರುವ ಚಿತ್ರಗಳನ್ನು ಮಾಡಲು ಮತ್ತು ಉತ್ತಮ ವ್ಯವಸ್ಥಾಪಕರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಈ ಮೂರು ದೊಡ್ಡ ಸ್ಟಾರ್‌ಗಳೊಂದಿಗೆ ಕೆಲಸ ಮಾಡುವ ಅವಕಾಶ ಮುಂದೆ ಬಂದರೇ ನಾನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ" ಎಂದು ಶ್ರದ್ಧಾ ಕಪೂರ್‌ ಹೇಳಿಕೊಂಡಿದ್ದಾರೆ.     

ಇನ್ನು ಶ್ರದ್ಧಾ ಕಪೂರ್ ಸದ್ಯ 'ಸ್ತ್ರಿ 2' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಜೊತೆಗೆ ರಾಜ್‌ಕುಮಾರ್ ರಾವ್, ಅಪರ್‌ಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ಕೂಡ ನಟಿಸಿದ್ದಾರೆ. ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಿತ್ತು. ಇದು ಅಭಿಮಾನಿಗಳ ಮನ ಗೆದ್ದಿದೆ.   

ಸ್ತ್ರೀ 2 ಚಿತ್ರವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ಭಾಕ್ಸಾಫಿಸ್ ಯಶಸ್ಸು ಅಕ್ಷಯ್ ಕುಮಾರ್ ಮತ್ತು ತಾಪ್ಸಿ ಪನ್ನು ಅವರ 'ಖೇಲ್ ಖೇಲ್ ಮೇ' ಮತ್ತು ಜಾನ್ ಅಬ್ರಹಾಂ ಅವರ 'ವೇದ'ವನ್ನು ಪುಡಿಮಾಡಿತು. ವರದಿಯ ಪ್ರಕಾರ 'ಸ್ತ್ರಿ 2' ಆರನೇ ದಿನದಲ್ಲಿಯೇ 254.55 ಕೋಟಿ ರೂ. ಗಳಿಸಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link