Silk Smitha : ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿತ್ತು ಸಿಲ್ಕ್ ಸ್ಮಿತಾ ಕಚ್ಚಿದ ಈ ಸೇಬು!

Sun, 03 Dec 2023-12:46 pm,

ವಂಡಿಚಕ್ಕರಂ ಸಿನಿಮಾ ಹಿಟ್ ಆಗ್ತಿದ್ದಂತೆಯೇ ವಿಜಯಕ್ಷ್ಮಿ ಲಕ್ ಬದಲಾಯ್ತು. ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್‌ ಆದರು.

ಚೆನ್ನೈನ ಹೆಸರಾಂತ ಎವಿಎಂ ಸ್ಟುಡಿಯೋ ಬಳಿ ಒಮ್ಮೆ ಸ್ಮಿತಾಳ ನೃತ್ಯ ನಿರ್ದೇಶಕ ವಿನು ಚಕ್ರವರ್ತಿ ಕಣ್ಣಿಗೆ ಬಿತ್ತು. ಅಲ್ಲಿಂದ ಓಪನ್‌ ಆಯ್ತು ಸಿಲ್ಕ್‌ ಅದೃಷ್ಟದ ಬಾಗಿಲು.   

ನಿರ್ದೇಶಕರ ಅವರ ಪತ್ನಿ ಕರ್ಣಪೂ ಸಿಲ್ಕ್ ಸ್ಮಿತಾಳಿಗೆ ನಟನೆ, ನೃತ್ಯ ತರಬೇತಿ ನೀಡಿ ಪೂರ್ಣ ಕಲಾವಿದೆಯನ್ನಾಗಿ ಮಾಡಿದರು.

ಸಿಲ್ಕ್ ಸ್ಮಿತಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಪಡ್ಡೆಹೈಕ್ಳ ನಿದ್ದೆ ಕದ್ದರು, ಇದರಿಂದಲೇ ಫೇಮಸ್ ಆದ್ರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 450 ಚಿತ್ರಗಳಲ್ಲಿ ನಟಿಸಿದರು. 

ನಟಿ ಸಿಲ್ಕ್ ಸ್ಮಿತಾ ಜೀವನದಲ್ಲಿ ಅನೇಕ ದುರಂತಗಳಿವೆ. ಅಚ್ಚರಿ ಹಾಗೂ ನಿಗೂಢತೆಯ ಬದುಕು ಅವರದ್ದು. ಅಂದು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸಿಲ್ಕ್ ಸ್ಮಿತಾ ಕಚ್ಚಿದ ಸೇಬಿಗೂ ಭಾರೀ ಬೇಡಿಕೆ ಇತ್ತಂತೆ.

ಸಿಲ್ಕ್ ಸ್ಮಿತಾ ಕಚ್ಚಿದ ಒಂದು ಸೇಬಿನ ಬೆಲೆ 200 ಆಗಿತ್ತಂತೆ. ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಹರಾಜಿನಲ್ಲಿ ಮಾರಾಟವಾಯ್ತು ಎಂಬ ಸುದ್ದಿ ಆ ಕಾಲದಲ್ಲಿ ಹಬ್ಬಿತ್ತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link