4 ಮರ್ಡರ್.. 3 ಪಾರ್ಟಿ.. 12 ವರ್ಷಗಳಿಂದ ಜೈಲಿನಲ್ಲೇ ಇರುವ ಖ್ಯಾತ ನಟಿ ..!

Mon, 16 Sep 2024-1:09 pm,

ಈ ಬ್ಯೂಟಿ ರಿಯಲ್ ಲೈಫ್ ಯಾವ ಕ್ರೈಂ ಸಿನಿಮಾಗೂ ಕಡಿಮೆ ಇಲ್ಲ. 4 ಕೊಲೆಗಳಿಗೆ ಕಾರಣವಾಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಈ ನಟಿ ಯಾರೆಂದು ತಿಳಿದರೆ ಶಾಕ್‌ ಆಗ್ತೀರಿ.

ಈ ನಟಿ ಹೆಸರು ಸಿಮ್ರಾನ್. ಆಕೆಯ ನಿಜವಾದ ಹೆಸರು ಸೀಮಾ ಸುರೇಂದ್ರನಾಥ್ ದೂಸಂಜ್. ನಟಿಯಾಗಬೇಕೆಂಬುದು ಸೀಮಾ ಸುರೇಂದ್ರನಾಥ್ ದೂಸಂಜ್ ಅವರ ಬಹುದಿನಗಳ ಕನಸು. ಈಕೆಯ ಕನಸಿಗೆ ಕುಟುಂಬಸ್ಥರ ಬೆಂಬಲ ದೊರೆಯಲಿಲ್ಲ. 

ಹೀಗಾಗಿ ಸಿಮ್ರಾನ್ 1995ರಲ್ಲಿ ಮನೆ ಬಿಟ್ಟು ಬರುತ್ತಾರೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅಂದದ ಗೊಂಬೆಯಂತಿದ್ದ ಸಿಮ್ರಾನ್ ಬಾಲಿವುಡ್ ಪಾರ್ಟಿಗಳು ಮತ್ತು ಕ್ರಿಕೆಟ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 

ಸಿಮ್ರಾನ್ ಗೆ 90ರ ದಶಕದಲ್ಲಿ ಆರೋಪಿಯೊಬ್ಬನ ಜೊತೆ ಸ್ನೇಹವಾಯಿತು. ಅಲ್ಲಿಂದಲೇ ಶುರುವಾಗಿದ್ದು ಈಕೆಯ ಕ್ರೈಂ ಡೈರಿಯ ಮೊದಲ ಅಧ್ಯಾಯ. ವಿಜಯ್ ಪಲಾಂಡೆ ಈ ಆರೋಪಿಯ ಹೆಸರು. 

ಸಿಮ್ರಾನ್ ಗೆ ಇದ್ದ ಹಣದ ಅವಶ್ಯಕತೆಯನ್ನೇ ಈತ ದಾಳವಾಗಿಸಿಕೊಂಡ. ಇಬ್ಬರೂ ಸೇರಿ ಶ್ರೀಮಂತರನ್ನ ಟಾರ್ಗೆಟ್ ಮಾಡಿ ಬಲೆಗೆ ಬೀಳಿಸುವ ಕೆಲಸಕ್ಕೆ ಕೈ ಹಾಕಿದರು.

ಈ ಚೆಲುವೆ ತನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡಳು. ಶ್ರೀಮಂತರನ್ನು ಆಕರ್ಷಿಸುತ್ತಿದ್ದಳು. ಅವರನ್ನು ಬಗ್ಗುಬಡಿದು.. ಈ ಇಬ್ಬರು ಸೇರಿ ಆದಷ್ಟು ಹಣ ವಸೂಲಿ ಮಾಡಿ.. ನಂತರ ಕೊಲೆ ಮಾಡುತ್ತಿದ್ದರು.

ಇದು ಒಂದೆಡೆ ಆದರೆ ಮತ್ತೊಂದೆಡೆ ನಟಿಯಾಗುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಿನಿಮಾಗಳ ಆಡಿಷನ್‌ ಅಟೆಂಡ್‌ ಮಾಡುತ್ತಿದ್ದಳು. 

ಹಾಗಾಗಿ ಮೊದಲ ಬಾರಿಗೆ 'ಅನೋಖಾ ಅನ್ವರ್' ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಳು. ಬಳಿಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವೇಳೆ ಈಕೆಯ ಗೆಳೆಯ ವಿದೇಶದಲ್ಲಿದ್ದ. 

ಒಂದಷ್ಟು ಕಾಲ ಸಿನಿಮಾ ಮಾಡಿದ್ದ ಈ ಚೆಲುವೆ ಮತ್ತೆ ಬಾಯ್ ಫ್ರೆಂಡ್ ಭಾರತಕ್ಕೆ ವಾಪಸ್ ಬಂದಾಗ ಇಬ್ಬರೂ ಸೇರಿ ಶ್ರೀಮಂತರ ಹೆಣ ಉರುಳಿಸಿ ಹಣ ಗಳಿಸಲು ಆರಂಭಿಸಿದರು. 

4 ಕೊಲೆಗಳನ್ನು ಮಾಡಿದ್ದ ಈ ಇಬ್ಬರೂ ಕೊನೆಗೂ ಪೊಲೀಸರು ಹೆಣೆದ ಬಲೆಗೆ ಸಿಲುಕಿದರು. ಬಳಿಕ ಕೈ ಗೆ ಕೋಳ ಹಾಕಿಸಿಕೊಂಡು ಜೈಲು ಪಾಲಾದರು. ಕಳೆದ 12 ವರ್ಷಗಳಿಂದ ಇಬ್ಬರೂ ಜೈಲಿನಲ್ಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link