ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?
ಮಹಾನಟಿ ಕಾರ್ಯಕ್ರಮದ ಜಡ್ಜ್ ರಮೇಶ್ ಅರವಿಂದ್ ಈ ಶೋನಲ್ಲಿ ನಟಿ ಸೌಂದರ್ಯ ಅನುಭವಿಸುತ್ತಿದ್ದ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ.
ಸೌಂದರ್ಯ ಅವರು ನಾಗವಲ್ಲಿಯಾಗಿ ಪರಕಾಯ ಪ್ರವೇಶ ಮಾಡಿದ್ದ ಸಮಯವನ್ನು ರಮೇಶ್ ಅರವಿಂದ್ ಸ್ಮರಿಸಿದ್ದಾರೆ. ನಟಿ ಸೌಂದರ್ಯ ಕ್ಲಾಸ್ಟ್ರೋಫೋಬಿಯಾ ಎಂಬ ಆರೋಗ್ಯ ಸಮಸ್ಯೆಯಿತ್ತು ಎಂಬುದನ್ನು ನಟ ರಮೇಶ್ ಅರವಿಂದ್ ಹೇಳಿದ್ದಾರೆ.
ನಟ ಅಜಯ್ ದೇವಗನ್ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಕ್ಲಾಸ್ಟ್ರೋಫೋಬಿಯಾ ಸಮಸ್ಯೆ ಅನುಭವಿಸುತ್ತಿದ್ದರು.
ಕ್ಲಾಸ್ಟ್ರೋಫೋಬಿಯಾ ಎಂದರೆ ಬಿಗಿಯಾದ ಅಥವಾ ಕಿಕ್ಕಿರಿದ ಸ್ಥಳಗಳಲ್ಲಿ ಭಯ ಉಂಟಾಗುತ್ತದೆ. ಕ್ಲಾಸ್ಟ್ರೋಫೋಬಿಯಾ ಇರುವವರು ಕಿಟಕಿಯಿಲ್ಲದ ಕೋಣೆ, ಕಿಕ್ಕಿರಿದ ಲಿಫ್ಟ್‌ನಲ್ಲಿ ಸಿಲುಕುವುದು, ದಟ್ಟಣೆಯ ಹೆದ್ದಾರಿ, ಸಣ್ಣ ಜಾಗದಲ್ಲಿ ಸಿಲುಕುವುದು, ಸುರಂಗ ಮಾರ್ಗಗಳಲ್ಲಿ ಪ್ಯಾನಿಕ್ ಅಟ್ಯಾಕ್ ಅನುಭವಿಸುತ್ತಾರೆ.
ಕ್ಲಾಸ್ಟ್ರೋಫೋಬಿಯಾ ಲಕ್ಷಣಗಳೆಂದರೆ ಅತಿಯಾದ ಭಯ ತಂದರೆ, ಭಯದಿಂದ ಬೆವರುವುದು, ನಡುಗುವುದು, ತಲೆ ತಿರುಗಿ ಬೀಳುವುದು, ಉಸಿರಾಟ ಏರುಪೇರಾಗುವುದು, ವಾಕರಿಕೆ ಬರುವುದು, ಹೃದಯ ಬಡಿತ ಏರುಪೇರಾಗುವುದು.