Actress Sudharani: ಚೆಂದನವನದ ನಟಿ ಸುಧಾರಾಣಿ ಮೊದಲ ಗಂಡನ ವಿಕೃತಿಯಿಂದ ಪಾರು ಮಾಡಿದ್ದು ಈ ಇಬ್ಬರು!!

Tue, 30 Apr 2024-4:27 pm,

ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ ಎವರ್‌ಗ್ರೀನ್‌ ಹಿರೋಯಿನ್..‌ ಎಷ್ಟೇ ವಯಸ್ಸಾದರೂ ಪಡ್ಡಹುಡುಗರಿಗೆ ಇಷ್ಟವಾಗೋ ಚೆಲುವೆ.. ಇವರ ಅದ್ಭುತ ನಟನೆಗೆ ಮಾರುಹೋಗದವರೇ ಇಲ್ಲ.. ಕನ್ನಡ ಚಿತ್ರರಂಗದ ಕಂಡ ಸಾಕಷ್ಟು ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ ಸುಧಾರಾಣಿ..  

ಸುಧಾರಾಣಿ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ತಮ್ಮ ಅದ್ಭುತ ಸರಳ ನಟನೆಯಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ನಟಿಗೆ ಸಿನಿರಂಗದಲ್ಲಿ ಸಿಕ್ಕಂತಹ ಯಶಸ್ಸು ವೈಯಕ್ತಿಕ ಜೀವನದದಲ್ಲಿ ಸಿಕ್ಕಿರಲಿಲ್ಲ..  

ನಟಿ ಸುಧಾರಾಣಿ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಮೊದಲು ತಂದೆ ತಾಯಿ ಮಾತಿಗೆ ಕಟ್ಟುಬಿದ್ದು ಅಮೇರಿಕಾದ ಅರವಳಿಕೆ ತಜ್ಞನನ್ನು ವಿವಾಹವಾಗಿದ್ದರು.. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇವರಿಬ್ಬರ ಸಂಬಂಧದಲ್ಲಿ ಪತಿಯ ಚಟವೇ ಶತ್ರುವಾಗಿ.. ಅವನೇ ಸುಧಾರಾಣಿಗೆ ಕೊಲ್ಲುವ ಸಂಚನ್ನು ಮಾಡಿದ್ದನಂತೆ.. ಹಾಗಾದ್ರೆ ಈ ಎಲ್ಲ ವಿಕೃತಿಯಿಂದ ನಟಿಯನ್ನು ಪಾರು ಮಾಡಿದ್ದು ಯಾರು?   

ಮದುವೆ ಎನ್ನುವ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದ ನಟಿ ಸುಧಾರಾಣಿ ಅನುಭವಿಸುತ್ತಿರುವ ನೋವು ಸಂಕಟ ಅವರ ಮನೆಯವರಿಗೆ ಗೊತ್ತಾಗುತ್ತದೆ.. ಆಗ ಅವರನ್ನು ಭಾರತಕ್ಕೆ ಕರೆಸಿಕೊಂಡಿರಲಿಲ್ಲವಾಗಿದ್ದರೆ ನಟಿ ಬದುಕಿ ಬರುವುದೇ ಸಂಶಯವಿತ್ತು..  

ಹೌದು ಸುಧಾರಾಣಿ ಗಂಡನ ವಿಕೃತಿ ತಿಳಿದ ಅವರ ಮನೆಯವರು ಪಾರ್ವತಮ್ಮ ರಾಜ್‌ಕುಮಾರ್‌ ಹಾಗೂ ಅಂಬರೀಷ್‌ ಅವರ ಸಹಾಯ ಕೇಳುತ್ತಾರೆ.. ಆ ಸಮಯದಲ್ಲಿ ದೇವರಾಗಿ ನಿಂತ ನಟ ಅಂಬರೀಷ್‌ ಅಮೇರಿಕಾದಲ್ಲಿರುವ ಸ್ನೇಹಿತರಿಗೆ ಹೇಳಿ ಸುಧಾರಾಣಿಯವರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಿದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link