`ಭಾಗ್ಯಲಕ್ಷ್ಮೀ` ಧಾರಾವಾಹಿಯ ಸುಷ್ಮಾ ರಾವ್ ಅವರ ಪತಿ ಇವರೇ.. ಕನ್ನಡದ ಖ್ಯಾತ ನಿರ್ದೇಶಕ ಇವರು!
ಗುಪ್ತಗಾಮಿನಿ ಸೀರಿಯಲ್ ಮೂಲಕ ಸುಷ್ಮಾ ರಾವ್ ಸಾಕಷ್ಟು ಹೆಸರು ಮಾಡಿದರು.
ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನ ಎನ್ನುವ ಪಾತ್ರದ ಮೂಲಕ ಜನರ ಮನ ಗೆದ್ದರು.
ನಟಿ ಸುಷ್ಮಾ ರಾವ್ ಅವರು ಹತ್ತು ವರ್ಷಗಳ ಬಳಿಕ ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ಭಾಗ್ಯ ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟರು.
ನಿಜ ಜೀವನದಲ್ಲಿ ಸುಷ್ಮಾ ತುಂಬಾ ನೋವುಂಡಿದ್ದಾರೆ. 10 ವರ್ಷ ಪ್ರೀತಿ ಮಾಡಿ ಮನೆಯವರ ವಿರೋಧದ ನಡುವೆಯೂ ಮದುವೆಯಾದರು. ಮದುವೆಯಾದ ಕೆಲ ವರ್ಷಗಳಲ್ಲಿಯೇ ನಟಿ ಸುಷ್ಮಾ ರಾವ್ ಸಂಸಾರದಲ್ಲಿ ವಿರಸ ಮೂಡಿತು.
ಇವರಿಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿಸಿ ಮದುವೆಯಾದರು. ಆದರೂ ಸುಖ ಸಂಸಾರ ಇವರದ್ದಾಗಲಿಲ್ಲ.
ಬಣ್ಣದ ಲೋಕದಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಅಸಾಧ್ಯವಾಯಿತು. ಒಬ್ಬರಿಗೊಬ್ಬರು ಸಮಯ ನೀಡಲಾಗದೇ ಭಿನ್ನಾಭಿಪ್ರಾಯ ಬೆಳೆಯಿತು.
ಕನ್ನಡದ ಖ್ಯಾತ ನಿರ್ದೇಶಕ ಪ್ರೀತಂ ಗುಬ್ಬಿ ಅವರೇ ಸುಷ್ಮಾ ಅವರ ಪತಿ. ಮುಂಗಾರು ಮಳೆ ಮೂಲಕ ಪ್ರೀತಮ್ ಗುಬ್ಬಿ ಪ್ರಖ್ಯಾತಿ ಪಡೆದರು.
ಸುಷ್ಮಾ ಮತ್ತು ಪ್ರೀತಂ ಗುಬ್ಬಿ ಇಂದಿಗೂ ಕೂಡ ಕೋರ್ಟು ಮೆಟ್ಟಿಲು ಏರಿಲ್ಲ ಎನ್ನಲಾಗುತ್ತಿದೆ. ಒಬ್ಬರಿಂದ ಒಬ್ಬರು ವಿಚ್ಛೇದನ ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತದೆ.