ಸ್ಟಾರ್‌ ನಟಿಯೊಂದಿಗೆ ದಳಪತಿ ವಿಜಯ್‌ ಅಫೇರ್‌? ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯ್ತು ದೊಡ್ಡ ಚರ್ಚೆ

Tue, 25 Jun 2024-1:57 pm,

ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್‌ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  ಕಾಲಿವುಡ್‌ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಕಿಂಗ್ ವಿಜಯ್.  

ಇಷ್ಟು ದಿನ ವಿಜಯ್ ರಾಜಕೀಯ‌ ಎಂಟ್ರಿ ವಿಚಾರ ಸಿಕ್ಕಾಪಟ್ಟೆ ಚರ್ಚೆಯಲ್ಲಿತ್ತು. ಆದರೆ ಇದೀಗ ಸ್ಟಾರ್‌ ನಟಿ ಜೊತೆ ವಿಜಯ್‌ ಹೆಸರು ಸೇರಿಕೊಂಡಿದೆ.   

ನಟ ವಿಜಯ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸಂಗೀತಾ, ಮಗ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಸುಂದರ ಕುಟುಂಬ ವಿಜಯ್‌ ಅವರದ್ದು. ಆದರೆ ತ್ರಿಶಾ ವಿಜಯ್‌ ಬರ್ಥ್‌ಡೇಗೆ ಮಾಡಿರುವ ಅದೊಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.  

ವಿಜಯ್ , ತ್ರಿಶಾ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಹಲವು ವರ್ಷಗಳಿಂದ ಕೇಳಿಬರ್ತಿವೆ. ಗಿಲ್ಲಿ ಮತ್ತು ಕುರುವಿ ಚಿತ್ರದ ಸಂದರ್ಭದಲ್ಲಿ ಹಬ್ಬಿದ ಈ ಗಾಳಿಸುದ್ದಿ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.    

ವಿಜಯ್‌ ಜೊತೆಗಿನ ಮಿರರ್‌ ಸೆಲ್ಫಿ ಫೋಟೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ತ್ರಿಶಾ ಇಂಗ್ಲಿಷ್ ಹಾಡೊಂದನ್ನೂ ಹಾಕಿ  ಪೋಸ್ಟ್ ಮಾಡಿದ್ದಾರೆ. ಇದೊಂದು ಪೋಸ್ಟ್‌ ತ್ರಿಶಾ ಮತ್ತು ವಿಜಯ್ ಕುರಿತ ಹಲವು ವದಂತಿಗಳು ಹಬ್ಬಲು ಕಾರಣವಾಗಿದೆ.    

ತ್ರಿಶಾ ಹಾಗೂ ವಿಜಯ್‌ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ನೆಟ್ಟಿಗರು ಇವರ ನಡುವೆ ಏನೋ ಇದೆ ಎಂಬಂತೆ ಮತನಾಡುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link