40 ರಲ್ಲೂ ತ್ರಿಶಾ 18 ರಂತೆ ಕಂಗೊಳಿಸಲು ಕಾರಣ ಅವರು ʼಆ ಕೆಲಸʼ ಮಾಡಲ್ವಂತೆ..!

Thu, 28 Dec 2023-9:01 pm,

ತ್ರಿಶಾ ಕಳೆದ 21 ವರ್ಷಗಳಿಂದ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.  

ತ್ರಿಶಾ ಅವರಿಗೆ ಈಗ 40 ವರ್ಷ. ಆದರೂ ಅವರು ಇಂದಿಗೂ ಅದೇ ಯೌವನ ಮತ್ತು ಸೌಂದರ್ಯದೊಂದಿಗೆ ಅದ್ಭುತವಾಗಿ ಕಾಣಿಸುತ್ತಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ಧತಿ. 

ತ್ರಿಶಾ ಚಿತ್ರರಂಗಕ್ಕೆ ಕಾಲಿಟ್ಟಾಗ ಎಷ್ಟು ಚಿಕ್ಕವರಾಗಿದ್ದರೋ, 40 ರ ಯೌವನದಲ್ಲಿಯೂ ಸಹ ಅದನ್ನ ಉಳಿಸಿಕೊಂಡಿದ್ದಾರೆ. 

ಹಲವು ವರ್ಷಗಳು ಕಳೆದರೂ ಅವರ ಯೌವನದ ಗುಟ್ಟು ಅನೇಕರಿಗೆ ತಿಳಿದಿಲ್ಲ. ತಮ್ಮ ಯೌವನ ಕಾಪಾಡಿಕೊಳ್ಳಲು ತ್ರಿಶಾ ಕಟ್ಟುನಿಟ್ಟಾದ ಆಹಾರ ಪದ್ದತಿ ಮತ್ತು ವ್ಯಾಯಾಮದ ನಿಯಮವನ್ನು ಅನುಸರಿಸುತ್ತಾರೆ.

ಹೊಳೆಯುವ ಮತ್ತು ಯೌವನದಿಂದ ಕಾಣುವ ಮುಖಕ್ಕೆ ಆರೋಗ್ಯಕರ ಜೀವನಶೈಲಿ ಮುಖ್ಯ ಅವಶ್ಯಕತೆ ಎಂದು ಎಲ್ಲರಿಗೂ ತಿಳಿದಿದೆ. ಇದನ್ನು ತ್ರಿಷಾ ಕೂಡ ಅನುಸರಿಸುತ್ತಿದ್ದಾರೆ.

ತ್ರಿಶಾ ಯಾವುದೇ ಕಾರಣಕ್ಕೂ ಫಾಸ್ಟ್ ಫುಡ್ ತಿನ್ನುವುದಿಲ್ಲ. ಎಣ್ಣೆಯಲ್ಲಿ ಬೇಯಿಸಿದ ಆಹಾರಗಳು ಅಥವಾ ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಅವರು ಮುಟ್ಟುವುದಿಲ್ಲ.

ನಟಿ ತ್ರಿಶಾ ಪ್ರತಿದಿನ ಬೆಳಗ್ಗೆ ಎದ್ದ ನಂತರ ಗ್ರೀನ್ ಟೀ ಇಲ್ಲವೆ ಶುಂಠಿ ಮತ್ತು ನಿಂಬೆ ರಸ ಬೆರೆಸಿದ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅಲ್ಲದೆ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನುತ್ತಾರೆ.

ಹೆಚ್ಚಾಗಿ ಮೇಕಪ್ ಮಾಡಿಕೊಳ್ಳಲು ತ್ರಿಶಾ ಇಷ್ಟ ಪಡುವುದಿಲ್ಲ ಎನ್ನಲಾಗಿದೆ. ತ್ರಿಶಾ ಮೊದಲಿನಿಂದಲೂ ತ್ವಚೆಗೆ ಪೂರಕವಾದ ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾತ್ರ ಬಳಸುತ್ತಾರಂತೆ.

ಚರ್ಮವನ್ನು ಹೊಳೆಯುವಂತೆ ಮತ್ತು ದೇಹವನ್ನು ಆರೋಗ್ಯಕರವಾಗಿಡಲು ದೇಹವನ್ನು ಹೈಡ್ರೇಟ್ ಆಗಿ ಇಡುವುದು ಬಹಳ ಮುಖ್ಯವೆಂದು ತ್ರಿಶಾ ಪರಿಗಣಿಸುತ್ತಾರೆ, ಅದಕ್ಕಾಗಿ ಅವರು ಹೆಚ್ಚಿಗೆ ನೀರು ಕುಡಿಯುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link