ತ್ರಿಶಾಗೆ ಈ ನಟನ ಮನೆಯಿಂದ ಬರುತ್ತಂತೆ ಊಟ..!ಪ್ರತಿನಿತ್ಯ ನಟಿಗೆ ಬಗೆ ಬಗೆಯ ಆಹಾರ ಕಳುಹಿಸಿ ಕೊಡುವವರು ಯಾರು ಗೊತ್ತಾ..?
ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
ಸಿನಿಮಾಗಳಿಂದ ದೂರ ಉಲಿದು ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟಿ ತ್ರಿಶಾ ವಿಜಯ್ ಜೊತೆಗಿನ ಸಿನಿಮಾದ ಮೂಲಕ ಕಮ್‌ಬ್ಯಾಕ್ ಮಾಡಿದ್ದರು.
ಲಿಯೋ ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟ ತ್ರಿಶಾ ಈ ಸಿನಿಮಾದ ಮೂಲಕ ಮತ್ತೆ ಸೂಪರ್ ಹಿಟ್ ಆಗಿದ್ದರು. ವಿಜಯ್ ತ್ರಿಶಾ ಜೋಡಿ ಮತ್ತದೇ ಮೋಡಿ ಮಾಡಿತ್ತು.
ನಟಿ ತ್ರಿಶಾಗೆ ಇದIಗ 40 ವರ್ಷ ವಯಸ್ಸು ಈಕೆ ಸಿನಿಮಾಗೆ ಎಂಟ್ರಿ ಕೊಟ್ಟು 20 ವರ್ಷಗಳು ಕಳೆದಿವೆ. ಆದರು ಕೂಡ 20 ಅರೆಯದ ಯುವತಿಯಂತೆ ಕಾಣುವ ನಟಿ ತ್ರಿಶಾ ತನ್ನ ಸೌಂದರ್ಯದಿಂದ ಮೋಡಿ ಮಾಡುವ ನಟಿ.
ಇಷ್ಟು ವರ್ಷ ಕಳೆದರು ಮದುವೆ ಆಗದ ಈ ನಟಿ ಅಭಿಮಾನಿಗಲ ಮನದರಸಿಯಾಗಿ, ನಟಿಯನ್ನು ಅಭಿಮಾನಿಗಳು ತಮ್ಮ ಮನದಲ್ಲಿಟ್ಟು ಪೂಜಿಸುತ್ತಿದ್ದಾರೆ, ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು ರೀ ಎಂಟ್ರಿ ಕೊಟ್ಟಿದ್ದ ನಟಿ ತ್ರಿಶಾ ವಿಜಯ್ ಅವರೊಂದಿಗೆ ಲಿಯೋ ಸಿನಿಮಾದ ಮೂಲಕ ಋಈ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಾಕ್ಸ್ ಆಫಿಸ್ಸ್‌ನಲ್ಲಿ ಸುಮಾರು 680 ಕೋಟಿ ರೂ. ಬಾಚಿಕೊಂಡಿತ್ತು.
ಈ ಸಿನಿಮಾದ ಹಿಟ್ ನಂತರ ನಟಿ ತ್ರಿಶಾಗೆ ಸಾಲು ಸಾಲು ಸಿನಿಮಾಗಳಲ್ಲಿ ಆಫರ್ ಬರುತ್ತಿದೆ. ಲಿಯೋ ಸಿನಿಮಾ ಅಷ್ಟೆ ಅಲ್ಲದೆ ನಟಿ ಈ ಮುಂಚೆ ಪೊನ್ನಿಯನ್ ಸೆಲ್ವನ್ ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಈ ಸಿನಿಮಾದಲ್ಲಿ ತ್ರಿಶಾ ಪಾತ್ರವನ್ನು ಕಂಡು ತ್ರಿಶಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು.
ಇಂತಹ ನಟಿಗಾಗಿ ಫ್ಯಾನ್ಸ್ ಕಾಯುತ್ತಾರೆ, ಅಂತಹದರಲ್ಲಿ ಈ ನಟಿಗೆ ಸ್ಟಾರ್ ಮನೆಯಿಂದ ಪ್ರತಿನಿತ್ಯ ಬಗೆ ಬಗೆಯ ಆಹಾರವನ್ನು ಕಳುಹಿಸಿ ಕೊಡಲಾಗುತ್ತಂತೆ. ಈ ಫೋಟೋಔನ್ನು ಸ್ವತಹಃ ನಟಿಯೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ನಟನೆಯ ವಿಶ್ವಂಭರ ಚಿತ್ರಲದಲ್ಲಿ ನಟಿ ತ್ರಿಶಾ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾದ ವೇಲೆ ನಟಿಗೆ ನಟ ಚಿರಂಜೀವಿ ಪ್ರತಿನಿತ್ಯ ಮನೆಯಿಂದ ಊಟ ಕಳುಹಿಸಿ ಕೊಡುತ್ತಿದ್ದರಂತೆ.
ಇದನ್ನು ನಟಿಯೇ ತನ್ನ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ನಟ ಚಿರಂಜೀವಿ ಅವರನ್ನು ತ್ರಿಶಾ ಅವರ ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
ಬಗೆ ಬಗೆಯ ರುಚಿಯಾ ಆಹಾರದ ಫೋಟೋಗಳನ್ನು ಪೋಸ್ಟ್ ಮಾಡಿದ ತ್ರಿಶಾ ನಟನಿಗೆ ತುಂಬು ಹೃದುದ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಿಶ್ವಂಭರ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತದ್ದು, ಮೆಗಾ ಸ್ಟಾರ್ ಅವರೋಮದಿಗೆ ನಟಿ ತ್ರಿಶಾ ಹಾಗೂ ಕನ್ನಡತಿ ಆಶಿಕಾ ಪೂನಚ್ಚಾ ಕೂಡ ನಟಿಸುತ್ತಿದ್ದಾರೆ.
ಇನ್ನೂ, ಸದ್ಯದಲ್ಲಿಯೇ ನ್ಯಾಶನಲ್ ಕ್ರಶ್ ರಶ್ಮಿಕಾ ಕೂಡ ಚಿತ್ರತಂಡ ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ.