ನಟಿ ವರಲಕ್ಷ್ಮಿ ಶರತ್‌ಕುಮಾರ್ ಅದ್ದೂರಿ ಮದುವೆ ಸಂಭ್ರಮ...ದಾಂಪತ್ಯಕ್ಕೆ ಸಾಕ್ಷಿಯಾಯ್ತು ಸ್ಟಾರ್ ತಾರಾ ಗಣ
ಶರತ್ ಕುಮಾರ್ ಪುತ್ರಿ, ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ತಮ್ಮ ಬಹು ಕಾಲದ ಗೆಳೆಯ ನಿಕೊಲಾಯ್ ಸಚ್ ದೇವ್ ಅವರೊಂದಿಗೆ ದಾಂಪತ್ಯ ಜಿವನ್ನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿಯ ಮದುವೆ ಥೈಲ್ಯಾಂಡ್‌ನಲ್ಲಿ ನಡೆಯಿತು. ಆ ನಂತರ ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಾಕ್ಷಿಯಾದರು.
ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿಕೋಲಸ್ ಜೋಡಿಗೆ ಶುಭ ಹಾರೈಸಿದರು.
ಟಾಲಿವುಡ್ ನಟ ಬಾಲಕೃಷ್ಣ ಹಾಗೂ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಸ್. ಥಮನ್ ಕೂಡ ವರಲಕ್ಷ್ಮಿ ಶರತ್ ಕುಮಾರ್ ಮದುವೆಗೆ ಸಾಕ್ಷಿಯಾದರು.
ಕಾಲಿವುಡ್ ಹಿರಿಯ ನಟ ವಿಜಯ್ ಕುಮಾರ್ ಮತ್ತು ಅವರ ಪುತ್ರಿ ನಟಿ ಶ್ರೀದೇವಿ ಆರತಕ್ಷತೆಗೆ ಆಗಮಿಸಿ ನವಜೋಡಿಗೆ ಶುಭ ಕೋರಿದರು.
ತಮಿಳು ಮತ್ತು ತೆಲುಗು ನಟ ಸಿದ್ಧಾರ್ಥ್ ಕೂಡ ಆರತಕ್ಷತೆಯಲ್ಲಿ ಭಾಗವಹಿಸಿ ನವ ದಂಪತಿಗೆ ಶುಭ ಕೋರಿದರು.
ಬಾಲಿವುಡ್ ನಟ ಜಾಕಿ ಶ್ರಾಫ್ ಕೂಡ ವರಲಕ್ಷ್ಮಿ ಶರತ್ ಕುಮಾರ್ ಮತ್ತು ಶರತ್ ಕುಮಾರ್ ಅವರೊಂದಿಗೆ ಚಿತ್ರಗಳಿಗೆ ಪೋಸ್ ನೀಡಿದರು.
ನಟಿ, ಮಾಜಿ ಸಚಿವೆ ರೋಜಾ ಮತ್ತು ಅವರ ಪತಿ ಸೆಲ್ವಮಣಿ ಕೂಡ ವರಲಕ್ಷ್ಮಿ ಶರತ್ ಕುಮಾರ್ ಅವರ ಮದುಯ ಫೋಟೋಸ್‌ಗೆ ಪೋಸ್ ಕೊಟ್ಟರು.