ಹಾಲಿನಂತ ಬಣ್ಣ.. ಬಳ್ಳಿಯಂತ ಸೊಂಟ... ಕಣ್ಕುಕ್ಕುವಂತಿದೆ ವೇದಿಕಾ ಮೈಮಾಟ..!
ಬಹುಭಾಷಾ ನಟಿಯಾಗಿ ಸಿನಿರಂಗದಲ್ಲಿ ಮಿಂಚಿತ್ತಿರುವ ವೇದಿಕಾ ಸ್ಟಾರ್‌ಗಳ ನೆಚ್ಚಿನ ತಾಣ ಮಾಲ್ಡೀವ್ಸ್‌ಗೆ ಹೋಗಿದ್ದರು. ಸಮುದ್ರಮಥನದಿಂದ ಎದ್ದು ಬಂದ ಚೆಲುವೆಯಂತೆ ಸಾಗರದಲ್ಲಿ ಬಿಕಿನಿ ತೊಟ್ಟು ಮಿಂದೆದ್ದಿರುವ ವೇದಿಕಾ ಫೋಟೋಗಳು ಪಡ್ಡೆಹುಡುಗರ ಕಣ್ಣುಕುಕ್ಕುತ್ತಿವೆ.
ʼಸಂಗಮʼ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ವೇದಿಕಾ ಬಳಿಕ ಶಿವಣ್ಣ ನಟನೆಯ `ಶಿವಲಿಂಗʼ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು.
ಕನ್ನಡ ಅಷ್ಟೇ ಅಲ್ಲದೆ, ಟಾಲಿವುಡ್, ಮಾಲಿವುಡ್ ಮತ್ತು ಕಾಲಿವುಡ್‌ನಲ್ಲಿಯೂ ಬೆಡಗಿಯ ಅಂದಕ್ಕೆ ಹಾಗೂ ನಟನೆಗೆ ಅಪಾರ ಅಭಿಮಾನಿಗಳಲಿದ್ದಾರೆ.
ವೇದಿಕಾಗೆ 34 ವರ್ಷ ಅಂದ್ರೆ ನಂಬೋಕೆ ಆಗಲ್ಲ ಅಲ್ವಾ.. ಅಂತಹ ಅಪರೂಪದ ಸೌಂದರ್ಯವತಿ ಈ ಕನ್ನಡತಿ. ಆಗಾಗ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಸದ್ಯ ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.
ಪಿಂಕ್ ಬಣ್ಣದ ಬಿಕಿನಿ ತೊಟ್ಟು, ಹಾಲಿನಿಂದ ಸ್ನಾನಮಾಡಿ ಎದ್ದು ಬಂದ ಗಂಧರ್ವ ಕನ್ಯೆಯಂತೆ ವೇದಿಕಾ ಕಂಗೊಳಿಸುತ್ತಿದ್ದಾರೆ. ವೇದಿಕಾ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಸಂಗಮ, ಶಿವಲಿಂಗ, ಹೋಮ್ ಮಿನಿಸ್ಟರ್ ಬಳಿಕ ಕನ್ನಡದ ʼಗಾನಾʼ ಸಿನಿಮಾದಲ್ಲಿ ವೇದಿಕಾ ನಟಿಸುತ್ತಿದ್ದು, ಮತ್ತೇ ಕನ್ನಡಾಭಿಮಾಗಳಿಗೆ ತೆರೆಮೇಲೆ ದರ್ಶನ ನೀಡಲಿದ್ದಾರೆ.