ತನ್ನ ಪತಿಗೆ ಎರಡನೇ ಪತ್ನಿಯಾಗಿ ಸಪ್ತಪದಿ ತುಳಿದ ಖ್ಯಾತ ನಟಿಯರಿವರು !

Mon, 04 Dec 2023-4:28 pm,

ಬಾಲಿವುಡ್‌ನ ರಾಜಮನೆತನದ ಜೋಡಿ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್  2012 ರಲ್ಲಿ ವಿವಾಹವಾದರು. ಕರೀನಾಗೂ ಮೊದಲು, ಸೈಫ್ 21 ನೇ ವಯಸ್ಸಿನಲ್ಲಿ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು.  ಅಲ್ಲದೆ ಸೈಫ್ ಗೆ ಮೊದಲ ಪತ್ನಿಯಿಂದ ಎರಡು ಮಕ್ಕಳಿದ್ದಾರೆ.  

ಮಾಜಿ ವಿಶ್ವ ಸುಂದರಿ ಲಾರಾ ದತ್ತಾ 2011 ರಲ್ಲಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ವಿವಾಹವಾದರು. ಆದರೆ, ಇದು ಮಹೇಶ್ ಅವರಿಗೆ ಇದು ಮೊದಲ ಮದುವೆಯಲ್ಲ. ಲಾರಾಗಿಂತ ಮೊದಲು, ಮಹೇಶ್ ಮಾಡೆಲ್ ಶ್ವೇತಾ ಜೈಶಂಕರ್ ಅವರನ್ನು ವಿವಾಹವಾಗಿದ್ದರು. 

ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಯನ್ನು ಮದುವೆಯಾಗುವ ಮುನ್ನ ಲಂಡನ್ ಮೂಲದ ಶ್ರೀಮಂತ ಉದ್ಯಮಿ ಕವಿತಾಳನ್ನು ಮದುವೆಯಾಗಿದ್ದರು. ಶಿಲ್ಪಾ ಕವಿತಾ ತನ್ನ ಪತಿಯನ್ನು ಬಿಟ್ಟು ಬಿಡುವಂತೆ ಆಮಿಷ ಒಡ್ಡಿದ್ದರು ಎನ್ನುವ ಆರೋಪ ಅಷಿಲ್ಪಾ ಮೇಲಿದೆ. ಆದರೆ, ಪತ್ನಿಯಿಂದ ಬೇರ್ಪಟ್ಟ ಒಂದು ವರ್ಷದ ನಂತರ ಶಿಲ್ಪಾ ಶೆಟ್ಟಿಯನ್ನು ಭೇಟಿಯಾಗಿದ್ದೇನೆ ಎನ್ನುತ್ತಾರೆ ರಾಜ್ ಕುಂದ್ರಾ. 

ಕರಿಷ್ಮಾಗೂ ಮೊದಲು, ಸಂಜಯ್ ನಂದಿತಾ ಮೆಹ್ತಾನಿ ಅವರನ್ನು ವಿವಾಹವಾಗಿದ್ದರು. ಆದರೆ, ಮದುವೆಯಾದ ೧೧ ವರ್ಷಗಳ ನಂತರ ಕರಿಷ್ಮಾ ಮತ್ತು ಸಂಜಯ್ ಕೂಡಾ ವಿಚ್ಛೇದನ ಹೊಂದಿದ್ದಾರೆ. 

ಚಲನಚಿತ್ರ ವಿತರಕ ಅನಿಲ್ ಥಡಾನಿ ಅವರು ರಾಮು ಸಿಪ್ಪಿ ಅವರ ಪುತ್ರಿ ನತಾಶಾ ಸಿಪ್ಪಿಯನ್ನು ವಿವಾಹವಾಗಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನಟಿ ರವೀನಾ ಟಂಡನ್ ಅವರೊಂದಿಗಿನ  ನಿಕಟ ಸಂಬಂಧವೇ ಅವರ ವಿಚ್ಛೇದನಕ್ಕೆ ಕಾರಣ ಎಂಬ ವದಂತಿಗಳಿವೆ. 

ಕಿರಣ್ ಖೇರ್ ಮತ್ತು ಅನುಪಮ್ ಖೇರ್ ಸುಂದರವಾದ ದಾಂಪತ್ಯವನ್ನು ಹೊಂದಿದ್ದಾರೆ. ಇದು ಇಬ್ಬರಿಗೂ ಎರಡನೇ ವಿವಾಹ. 

ಸೂಪರ್‌ಸ್ಟಾರ್ ಧರ್ಮೇಂದ್ರ ಅವರು 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ಮೊದಲು ವಿವಾಹವಾದರು. ಆದರೆ ನಂತರ  ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅವರನ್ನು ವರಿಸಿದ್ದಾರೆ. ಇಲ್ಲಿ  ಧರ್ಮೇಂದ್ರ ಅವರ ಮೊದಲ ಪತ್ನಿ ವಿಚ್ಛೇದನವನ್ನು ಬಯಸದ ಕಾರಣ, ಅವರು ಎರಡನೇ ಬಾರಿಗೆ ಮದುವೆಯಾಗುವ ಸಲುವಾಗಿ ಇಸ್ಲಾಂಗೆ ಮತಾಂತರಗೊಂಡರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link