90 ರ ದಶಕದಲ್ಲಿಯೇ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಿದ್ದ ನಟಿಯರಿವರು
1983 ರ ಹಿಮ್ಮತ್ವಾಲಾ ಚಿತ್ರದಿಂದ ಶ್ರೀದೇವಿಗೆ ಸ್ಟಾರ್‌ಡಮ್ ಸಿಕ್ಕಿತು.ಇದರ ನಂತರ ಅವರು ಸದ್ಮಾ, ನಗೀನಾ, ಲಮ್ಹೆ, ಖುದಾ ಗವಾಹ್ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಇದರ ನಂತರ, ಅವರು ಬಾಕ್ಸ್ ಆಫೀಸ್ ಕ್ವೀನ್ ಮತ್ತು ಲೇಡಿ ಬಚ್ಚನ್ ಎಂಬ ಬಿರುದನ್ನು ಪಡೆದರು. ಏಕೆಂದರೆ ಒಂದು ಸಮಯದಲ್ಲಿ ಶ್ರೀ ದೇವಿ ಅಮಿತಾಬ್ ಬಚ್ಚನ್‌ಗೆ ಸರಿಸಮಾನವಾಗಿ 60 ಲಕ್ಷ ರೂಸಂಭಾವನೆ ಪಡೆಯುತ್ತಿದ್ದರು. 1997 ರಲ್ಲಿ, ಜುದಾಯಿ ಚಿತ್ರಕ್ಕಾಗಿ ಶ್ರೀದೇವಿ 1 ಕೋಟಿ ರೂ. ಪಡೆದಿದ್ದಾರೆ.
ಆ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಮಾಧುರಿ ಕೂಡಾ ಒಬ್ಬರು. ಅಂಜಾಮ್ ಚಿತ್ರದ ನಂತರ ಮಾಧುರಿ 1 ಕೋಟಿವರೆಗೆ ಸಂಭಾವನೆ ಪಡೆಯುತ್ತಿದ್ದರು. ಹಮ್ ಆಪ್ಕೆ ಹೇ ಕೌನ್ ಚಿತ್ರದ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾದರು. ಹಮ್ ಆಪ್ಕೆ ಹೇ ಕೌನ್ ಚಿತ್ರಕ್ಕಾಗಿ ಮಾಧುರಿ ಪಡೆದ ಸಂಭಾವನೆ 2.7 ಕೋಟಿ ರೂ.
1992 ರಲ್ಲಿ, ಜೂಹಿ ಪ್ರತಿ ಚಿತ್ರಕ್ಕೆ 10 ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತಿದ್ದರು. ಆದರೆ 1993 ರಲ್ಲಿ, ಢರ್ , ಹಮ್ ಹೇ ರಾಹಿ ಪ್ಯಾರ್ ಕೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಅವರ ಸಂಭಾವನೆ 20 ಲಕ್ಷಕ್ಕೆ ಏರಿತ್ತು. 1994 ರಲ್ಲಿ, ಅವರು ಒಂದು ಚಿತ್ರಕ್ಕೆ 25 ಲಕ್ಷದವರೆಗೆ ಪಡೆಯುತ್ತಿದ್ದರು. ಆದರೆ ನಂತರ ಇದ್ದಕ್ಕಿದ್ದಂತೆಯೇ ಜೂಹಿ ಕೂಡಾ ಕೋಟಿ ಸಂಭಾವನೆ ಪಡೆಯಲು ಆರಂಭಿಸಿದರು.
ಕರಣ್ ಅರ್ಜುನ್ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಯಶಸ್ಸಿನ ನಂತರ, ಕಾಜೋಲ್ ತನ್ನ ಛಾಪು ಮೂಡಿಸಿದ್ದರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಕುಚ್ ಕುಚ್ ಹೋತಾ ಹೈ, ಪ್ಯಾರ್ ತೋ ಹೋನಾ ಹಿ ಥಾ ಮತ್ತು ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಮುಂತಾದ ಚಿತ್ರಗಳಿಗೆ ಅವರು 1 ಕೋಟಿ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ.
ಕರಿಷ್ಮಾ ರಾಜಾ ಹಿಂದೂಸ್ತಾನಿಯಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ 50-70 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ದಿಲ್ ತೋ ಪಾಗಲ್ ಹೈ, ಬಿವಿ ನಂ.1 ಮತ್ತು ಹಮ್ ಸಾಥ್ ಸಾಥ್ ಹೇ ಚಿತ್ರಗಳ ನಂತರ ಅವರು 1 ಕೋಟಿಯವರೆಗೂ ಶುಲ್ಕ ಪಡೆಯಲಾರಂಭಿಸಿದರು.