Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!
ನಟಿ ನೀತು ಕಪೂರ್ ಅವರು ರಿಷಿ ಕಪೂರ್ ಅವರನ್ನು ಮದುವೆಯಾದ ನಂತರ ಬಾಲಿವುಡ್’ನೊಂದಿಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟರು. ಆದರೆ ಮದುವೆಯಾಗಿ ಹಲವು ವರ್ಷಗಳ ನಂತರ ಮತ್ತೆ ತೆರೆಗೆ ಮರಳಿದ್ದರು.
ಗೋಲ್ಡಿ ಬೆಹ್ಲ್ ಅವರ ಪತ್ನಿ ಮತ್ತು ನಟಿ ಸೋನಾಲಿ ಬೇಂದ್ರೆ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಮದುವೆಯ ನಂತರ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟರು. ಕೆಲವು ವರ್ಷಗಳ ನಂತರ, ಅವರು ಮತ್ತೆ ಉದ್ಯಮಕ್ಕೆ ಮರಳಿದರು.
ಕಪೂರ್ ಕುಟುಂಬದಲ್ಲಿ ಮದುವೆಯ ನಂತರ ಸೊಸೆ ಸಿನಿಮಾಗಳಲ್ಲಿ ಕೆಲಸ ಮಾಡುವಂತಿರಲಿಲ್ಲ. ಈ ಕಾರಣಕ್ಕಾಗಿ, ಬಬಿತಾ ರಣಧೀರ್ ಕಪೂರ್ ಅವರನ್ನು ಮದುವೆಯಾದ ನಂತರ ನಟನಾ ವೃತ್ತಿಯನ್ನು ತೊರೆದರು. ಕರಿಷ್ಮಾ ಮತ್ತು ಕರೀನಾ ಹುಟ್ಟಿದ ಸ್ವಲ್ಪ ಸಮಯದ ನಂತರ, ಬಬಿತಾ ರಣಧೀರ್ ಕಪೂರ್’ನಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಆದರೆ ನಟನಾ ವೃತ್ತಿಗೆ ಮರಳಲಿಲ್ಲ.
ದಿಲೀಪ್ ಕುಮಾರ್ ಮತ್ತು ಸೈರಾ ಬಾನು ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಮದುವೆಯ ನಂತರ ಸೈರಾ ಚಿತ್ರರಂಗವನ್ನು ತೊರೆದು ವೈವಾಹಿಕ ಜೀವನದತ್ತ ಸಂಪೂರ್ಣ ಗಮನ ಹರಿಸತೊಡಗಿದರು.
ಅನೇಕ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಜನರ ಮನ ಗೆದ್ದ ನಟಿ ಮುಮ್ತಾಜ್ ಅವರ ಕಾಲದ ಸೂಪರ್ ಹಿಟ್ ನಟಿಯೂ ಆಗಿದ್ದರು. ಆದರೆ ಮಯೂರ್ ಮಾಧ್ವನಿ ಅವರನ್ನು ಮದುವೆಯಾದ ನಂತರ ನಟಿ ಚಿತ್ರರಂಗವನ್ನು ತೊರೆದು ವಿದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು.
ಮೀನಾಕ್ಷಿ ಸಿನಿಮಾಟೋಗ್ರಫಿಯಲ್ಲಿ ಒಂದಕ್ಕಿಂತ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಮದುವೆ ನಂತರ ಬಾಲಿವುಡ್ ಗೆ ಗುಡ್ ಬೈ ಹೇಳಿ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದಾರೆ ಮೀನಾಕ್ಷಿ.