99 ವರ್ಷಗಳ ಬಳಿಕ ಗುರು, ಸೂರ್ಯ, ಮಂಗಳರಿಂದ ಅದ್ಭುತ ಯೋಗ, ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ
![ಗ್ರಹ ಗೋಚಾರ ಗ್ರಹ ಗೋಚಾರ](https://kannada.cdn.zeenews.com/kannada/sites/default/files/2024/08/30/438505-viparitrajayogaeffect.jpg?im=FitAndFill=(500,286))
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಗ್ರಹಗಳ ರಾಜ ಸೂರ್ಯ ದೇವ ತನ್ನದೇ ಆದ ಸಿಂಹ ರಾಶಿಯಲ್ಲಿದ್ದಾನೆ, ದೇವಗುರು ಬೃಹಸ್ಪತಿ ವೃಷಭ ರಾಶಿಯಲ್ಲಿದ್ದು, ಕಮಾಂಡರ್ ಗ್ರಹ ಮಂಗಳ ಮಿಥುನ ರಾಶಿಯಲಿದ್ದಾನೆ.
![ಒಂದೇ ನಕ್ಷತ್ರದಲ್ಲಿ ಗುರು-ಮಂಗಳ ಒಂದೇ ನಕ್ಷತ್ರದಲ್ಲಿ ಗುರು-ಮಂಗಳ](https://kannada.cdn.zeenews.com/kannada/sites/default/files/2024/08/30/438504-viparitrajayogaeffect-1.jpg?im=FitAndFill=(500,286))
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಗುರು ಹಾಗೂ ಮಂಗಳ ಇಬ್ಬರೂ ಕೂಡ ಮೃಗಶಿರ ನಕ್ಷತ್ರದಲ್ಲಿ ಕುಳಿತಿದ್ದಾರೆ.
![ಮೂರು ಗ್ರಹಗಳಿಂದ ಅದ್ಭುತ ಯೋಗ ಮೂರು ಗ್ರಹಗಳಿಂದ ಅದ್ಭುತ ಯೋಗ](https://kannada.cdn.zeenews.com/kannada/sites/default/files/2024/08/30/438503-viparitrajayogaeffect-2.jpg?im=FitAndFill=(500,286))
ಈ ರೀತಿಯಾಗಿ ಆಗಸ್ಟ್ 26ರಿಂದ ಸೆಪ್ಟೆಂಬರ್ 15ರ ನಡುವೆ ಗುರು, ಸೂರ್ಯ, ಮಂಗಳರಿಂದ ಅದ್ಭುತ ಯೋಗ ನಿರ್ಮಾಣವಾಗುತ್ತಿದೆ. ಗುರುವು ಮೂರು, ಆರು ಮತ್ತು ಎಂಟನೇ ಮನೆಗೆ ಪ್ರವೇಶಿಸಿದಾಗ, ವಿಪರೀತ ರಾಜಯೋಗವು ರೂಪುಗೊಳ್ಳುತ್ತದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಬರೋಬ್ಬರಿ 99 ವರ್ಷಗಳ ಬಳಿಕ ಈ ರೀತಿಯ ಅದ್ಭುತ ಯೋಗ ನಿರ್ಮಾಣವಾಗುತ್ತಿದ್ದು,ಇದರಿಂದ ಮೂರು ರಾಶಿಯ ಜನರು ವಿಶೇಷ ಪ್ರಯೋಜನವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಮೇಷ ರಾಶಿಯವರಿಗೆ ಗುರು 3ನೇ ಮನೆಯಲ್ಲಿರುತ್ತಾನೆ. ಗುರು, ಸೂರ್ಯ, ಮಂಗಳನ ಪ್ರಭಾವದಿಂದ ಈ ರಾಶಿಯ ಜನರಿಗೆ ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಸಿಗಲಿದೆ. ಹಣದ ಹರಿವು ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ. ಆರೋಗ್ಯದ ವಿಚಾರದಲ್ಲೂ ಸಮಯ ಅದ್ಭುತವಾಗಿದೆ.
ತುಲಾ ರಾಶಿಯವರಿಗೆ ಎಂಟನೇ ಮನೆಯಲ್ಲಿ ಗುರು ಇದ್ದಾನೆ. ಗುರು, ಸೂರ್ಯ, ಮಂಗಳ ಗ್ರಹಗಳು ಸೆಪ್ಟೆಂಬರ್ 15ರವರೇ ಈ ರಾಶಿಯ ಜನರಿಗೆ ಭಾಗ್ಯೋದಯವನ್ನು ಕರುಣಿಸ್ಲಿದ್ದಾರೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧಯ್ತೆ ಇದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ. ಒಟ್ಟಾರೆಯಾಗಿ ರಾಜಯೋಗವನ್ನು ಅನುಭವಿಸುವಿರಿ.
ಮಕರ ರಾಶಿಯವರಿಗೆ ಗುರುವು ಐದನೇ ಮನೆಯಲ್ಲಿದ್ದಾನೆ. ಇದಲ್ಲದೆ, ಸಾಡೇಸಾತಿ ಶನಿಯ ಕೊನೆಯ ಘಟ್ಟದಲ್ಲಿರುವ ಈ ರಾಶಿಯ ಜನರಿಗೆ ದಿಢೀರ್ ಧನಲಾಭದಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಆಫರ್ ಲೆಟರ್ ದೊರೆಯಬಹುದು. ವಿದೇಶ ವ್ಯಾಪಾರಸ್ಥರಿಗೆ ಬಂಪರ್ ಲಾಭ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.