ಅನ್ನ ಬೇಯುವಾಗ ಒಂದು ಚಮಚ ಈ ಎಣ್ಣೆ ಹಾಕಿ.. ಒಂದೇ ವಾರದಲ್ಲಿ ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ಉಪಾಯ ಮತ್ತೊಂದಿಲ್ಲ!
ಅನ್ನ ತಿಂದರೂ ತೂಕ ಇಳಿಸಿಕೊಳ್ಳಬಹುದು… ಇದು ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಆದರೆ ಅಡುಗೆ ಮಾಡುವಾಗ ಅಕ್ಕಿಯ ಕ್ಯಾಲೊರಿ ಅಂಶವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕು.
ದೇಹದಲ್ಲಿ ಅಕ್ಕಿ ಗ್ಲೈಕೋಜೆನ್ ಆಗಿ ಪರಿವರ್ತನೆಯಾಗುತ್ತದೆ. ಯಾರಾದರೂ ವ್ಯಾಯಾಮದ ನಂತರ ಅಥವಾ ಯಾವುದೇ ದೈಹಿಕ ಚಟುವಟಿಕೆಯ ನಂತರ ಅನ್ನವನ್ನು ಸೇವಿಸಿದರೆ, ಸ್ನಾಯುಗಳಿಗೆ ಶಕ್ತಿ ಸಿಗುತ್ತದೆ. ಹೀಗೆ ಮಾಡದಿದ್ದರೆ, ಗ್ಲೈಕೋಜೆನ್ ಶೀಘ್ರದಲ್ಲೇ ಗ್ಲೂಕೋಸ್ ಆಗಿ ಬದಲಾಗುತ್ತದೆ. ಹೀಗಾದಲ್ಲಿ ಕೊಬ್ಬಿನಂಶ ಶೇಖರಣೆಯಾಗುತ್ತದೆ.
ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (USC) ಪ್ರಕಾರ, ಅಕ್ಕಿಯಲ್ಲಿ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವೆಂದರೆ ಕುದಿಯುವ ನೀರಿಗೆ ಒಂದು ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ನಂತರ ಅದರಲ್ಲಿ ಅಕ್ಕಿಯನ್ನು ಸುಮಾರು 25 ನಿಮಿಷಗಳ ಕಾಲ ಬೇಯಿಸುವುದು.
ಈ ರೀತಿ ತಯಾರಿಸಿದ ನಂತರ, 12 ಗಂಟೆಗಳ ಕಾಲ ರೆಫ್ರಿಜರೇಟರ್ನಲ್ಲಿ ತಣ್ಣಗಾಗಿಸಬೇಕು. ಹೀಗೆ ಮಾಡುವುದರಿಂದ ಅಕ್ಕಿಯ ಕ್ಯಾಲೊರಿಗಳನ್ನು ಶೇಕಡಾ 60 ರಷ್ಟು ಕಡಿಮೆ ಮಾಡಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)