ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನ
ಪ್ರತಿ ಮನೆಯಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುತ್ತೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ದೇವರಿಗೆ ದೀಪ ಹಚ್ಚುವಾಗ ಕೆಲವರು ಎಣ್ಣೆ ದೀಪ ಹಚ್ಚಿದರೆ, ಇನ್ನು ಕೆಲವರು ತುಪ್ಪದ ದೀಪವನ್ನು ಹಚ್ಚುತ್ತಾರೆ.
ದೇವರಿಗೆ ತುಪ್ಪದ ದೀಪ ಹಚ್ಚುವುದು ಶ್ರೇಷ್ಠ. ಇಲ್ಲವಾದರೆ ಎಳ್ಳೆಣ್ಣೆ ದೀಪ ಹಚ್ಚಬೇಕು.ಸಾಧ್ಯವಿಲ್ಲ ಎಂದಾದರೆ ಸಾಸಿವೆ ಎಣ್ಣೆ ಬಳಸಿ ದೀಪ ಬೆಳಗಬಹುದು. ಅಡುಗೆ ಎಣ್ಣೆಯನ್ನು ದೇವರ ದೀಪಕ್ಕೆ ಬಳಸಬಾರದು.
ಇನ್ನು ದೇವರ ದೀಪಕ್ಕೆ ಎಣ್ಣೆ ಹಾಕುವಾಗ ಎಣ್ಣೆಯ ಜೊತೆಗೆ ಒಂದು ಎಸಳು ಲವಂಗ ಹಾಕಬೇಕು. ನಂತರ ಎಲ್ಲಾ ಎಣ್ಣೆ ಖಾಲಿಯಾದ ಮೇಲೆ ಆ ಲವಂಗವನ್ನು ತೆಗೆದು ತೆಂಗಿನ ಮರದ ಕೆಳಗೆ ಹಾಕಬೇಕು.
ಹೀಗೆ ಮಾಡಿದರೆ ಮನೆಯ ಎಲ್ಲಾ ರೀತಿಯ ಕಷ್ಟ ನಿವಾರಣೆಯಾಗುತ್ತದೆ ಎನ್ನಲಾಗಿದೆ. ಆರ್ಥಿಕ ಸಂಕಷ್ಟಗಳೆಲ್ಲಾ ಬಗೆಹರಿಯುವುದು. ಮನಸ್ಸಿನ ಆಸೆಯಂತೆ ಉದ್ಯೋ ಲಭಿಸುವುದು. ಮನಸ್ಸಿನ ಸುಖ ಶಾಂತಿ ಹೆಚ್ಚುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ