ಮೊಸರು ಬಜ್ಜಿಯಲ್ಲಿ ಈ ಒಂದು ವಸ್ತುವನ್ನು ಸೇರಿಸಿ ತಿಂದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಆಹಾರ ಮತ್ತು ಪಾನೀಯಡ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆದರೆ ಆಹಾರವನ್ನು ಸೇವಿಸುವಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ಏನನ್ನು ತಿನ್ನಬೇಕು ಎನ್ನುವುದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹ ರೋಗಿಗಳು ಊಟದ ಸಮಯದಲ್ಲಿ ಮೊಸರು ಬಜ್ಜಿ ಸೇವಿಸಬಹುದು.
ಮಧುಮೇಹ ರೋಗಿಗಳು ಮೊಸರುಬಜ್ಜಿಯಲ್ಲಿ ಮೆಂತ್ಯೆ ಸೊಪ್ಪು ಬಳಸಿದರೆ ಪ್ರಯೋಜನಕಾರಿಯಾಗಲಿದೆ. ಮೆಂತ್ಯ ಸೊಪ್ಪುಗಳ ಬಳಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಕೆ, ಫೋಲಿಕ್ ಆಮ್ಲ, ರೈಬೋಫ್ಲಿನ್ ಮತ್ತು ತಾಮ್ರದಂತಹ ಅನೇಕ ಪೋಷಕಾಂಶಗಳು ಮೆಂತ್ಯ ಸೊಪ್ಪಿನಲ್ಲಿ ಕಂಡುಬರುತ್ತವೆ. ಅಷ್ಟೇ ಅಲ್ಲ, ಇದರ ಎಲೆಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮೆಂತ್ಯೆ ಸೊಪ್ಪಿನಲ್ಲಿ ಕರಗುವ ಫೈಬರ್ ಹೇರಳವಾಗಿರುತ್ತದೆ. ಇದರಿಂದಾಗಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯು ನಿಧಾನಗೊಳ್ಳುತ್ತದೆ, ಜೀರ್ಣಕ್ರಿಯೆಯು ನಿಧಾನವಾಗಿರುತ್ತದೆ.
ಮೆಂತ್ಯದ ನೀರು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಮೆಂತ್ಯೆ ಬೀಜವನ್ನು ರಾತ್ರಿಯಿಡೀ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಫಿಲ್ಟರ್ ಮಾಡಿ ಕುಡಿಯಿರಿ. ಮೆಂತ್ಯವನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಕುಡಿಯಬಹುದು.