ಈರುಳ್ಳಿ ರಸವನ್ನು ಈ ಎಣ್ಣೆ ಜೊತೆ ಬೆರೆಸಿ ಹಚ್ಚಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!
ಕೂದಲು ಉದುರುವುದನ್ನು ತಡೆಯಲು ತಲೆಹೊಟ್ಟು ಹೋಗಲಾಡಿಸಲು ಮತ್ತು ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಲು ಈರುಳ್ಳಿ ರಸವನ್ನು ಬಳಸಬೇಕು.
ಈರುಳ್ಳಿ ರಸದಲ್ಲಿ ಹೇರಳವಾಗಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.
ಬಿಳಿ ಕೂದಲು ಕಪ್ಪಾಗಲು,ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಹಚ್ಚಬೇಕು. ಅದಕ್ಕಾಗಿ, ಎರಡೂ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು.
ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬೇಕಾದರೆ ನೆಲ್ಲಿ ಕಾಯಿ ರಸವನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಬೇಕು.ಎರಡು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಕೂದಲಿಗೆ ಹಚ್ಚಬೇಕು.
ಕೂದಲು ಕಪ್ಪಾಗಲು ಈರುಳ್ಳಿ ರಸವನ್ನು ಅಲೋವೆರಾದೊಂದಿಗೆ ಬೆರೆಸಿ ಹಚ್ಚಬಹುದು. ಇದಕ್ಕಾಗಿ ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಹಚ್ಚಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.