ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ನೆಲ ಫಳ ಫಳ ಹೊಳೆಯುವುದರ ಜೊತೆಗೆ ಸೊಳ್ಳೆ, ನೊಣ, ಜಿರಳೆ ಯಾವ ಕೀಟವೂ ಬರುವುದಿಲ್ಲ !
ಮಳೆಗಾಲದಲ್ಲಿ ಮಳೆ ಕಾಟ ಒಂದು ಕಡೆಯಾದರೆ ಸೊಳ್ಳೆ, ನೊಣಗಳ ಕಾಟ ಇನ್ನೊಂದು ಕಡೆ.ಸೊಳ್ಳೆ ಕಾಟ ಹೆಚ್ಚಾದಂತೆ ಹಲವು ರೋಗಗಳ ಅಪಾಯವೂ ಹೆಚ್ಚಾಗುತ್ತದೆ.ಇಂಥಹ ಪರಿಸ್ಥಿತಿಯಲ್ಲಿ ಸೊಳ್ಳೆಯನ್ನು ಮನೆಯೊಳಗೆ ಬಾರದಂತೆ ತಡೆಯಲು ಈ ವಸ್ತುಗಳನ್ನು ಬಳಸಬಹುದು.
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.ಮನೆ ಸ್ವಚ್ಚವಾಗಿಟ್ಟುಕೊಳ್ಳಲು ನಿತ್ಯ ಮನೆ ಒರೆಸಬೇಕು.ಮನೆ ಒರೆಸುವಾಗ ನೀರಿಗೆ ಈ ಒಂದು ವಸ್ತುವನ್ನು ಬೆರೆಸಬೇಕು.
ಮನೆ ಒರೆಸುವ ನೀರಿಗೆ ಈ ವಸ್ತುವನ್ನು ಬೆರೆಸುವುದರಿಂದ ಮನೆಯ ನೆಲ ಕನ್ನಡಿಯಂತೆ ಹೊಳೆಯುವುದಲ್ಲದೆ, ಎಲ್ಲಾ ರೀತಿಯ ಕೀಟಗಳನ್ನು ಮನೆಯಿಂದ ದೂರ ಇಡುತ್ತದೆ.
ನೀರಿನಲ್ಲಿ ದಾಲ್ಚಿನ್ನಿ ಪುಡಿ ಅಥವಾ ಚಕ್ಕೆ ಪುಡಿಯನ್ನು ಹಾಕಿ ಕುದಿಸಿ.ನಂತರ ಆ ನೀರಿನಿಂದ ಮನೆ ಒರೆಸುವ ನೀರಿಗೆ ಹಾಕಿ ಮನೆಯ ನೆಲವನ್ನು ಒರೆಸಿ.ಈ ನೀರಿನಿಂದ ನೆಲದ ಕೊಳೆ ಸಂಪೂರ್ಣವಾಗಿ ಮಾಯವಾಗುವುದಲ್ಲದೆ, ನೊಣ,ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.
ಮನೆಗೆ ಸೊಳ್ಳೆ ಬಾರದಂತೆ ತಡೆಯಬೇಕಾದರೆ ಮನೆ ಒರೆಸುವ ನೀರಿಗೆ ಸ್ವಲ್ಪ ವಿನೆಗರ್ ಅನ್ನು ಬೆರೆಸಬೇಕು.ಇದರಿಂದ ನೆಲದ ಕಲೆ ಹೋಗುವುದಲ್ಲದೆ, ಕ್ರಿಮಿ, ಸೊಳ್ಳೆಗಳು ಮನೆಯೊಳಗೆ ಬರಲು ಸಾಧ್ಯವಾಗುವುದಿಲ್ಲ.
ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ಲವಂಗದ ಪುಡಿಯನ್ನು ಕೂಡಾ ಬೆರೆಸಿ. ಇದು ನೆಲದ ಮೇಲಿನ ಹಳದಿ ಬಣ್ಣವನ್ನು ತೆಗೆದು ಹಾಕುವುದಲ್ಲದೆ, ಸೊಳ್ಳೆ ನೊಣಗಳ ಕಾಟವನ್ನು ಕೂಡಾ ತಡೆಯುತ್ತದೆ.
ಮನೆಯಲ್ಲಿ ಸೊಳ್ಳೆಗಳ ಕಾಟವನ್ನು ಹೋಗಲಾಡಿಸಲು ಎಣ್ಣೆಯನ್ನು ಬಳಸಬಹುದು. ಅಂದರೆ ಲ್ಯಾವೆಂಡರ್ ಎಣ್ಣೆ ಅಥವಾ ಪುದೀನಾ ಎಣ್ಣೆಯಂತಹ ಸಾರಭೂತ ತೈಲಗಳನ್ನು ನೀರಿನಲ್ಲಿ ಬೆರೆಸಿದರೆ,ಕೀಟಗಳು ಮತ್ತು ಸೊಳ್ಳೆಗಳು ಮನೆಯೊಳಗೆ ಬರುವುದೇ ಇಲ್ಲ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.