ಸಾಯಿ ಪಲ್ಲವಿ, ರುಕ್ಮಿಣಿ ವಸಂತ್‌ಗೆ ವಾಯ್ಸ್‌ ಡಬ್ಬಿಂಗ್‌ ಮಾಡೋದು ಹುಡುಗಿ ಅಲ್ಲ... ಒಬ್ಬ ಹುಡುಗ! ಆ ಕಲಾವಿದ ಯಾರು ಗೊತ್ತಾ? ಸುಂದರ ಕಂಠದ ಹಿಂದಿನ ವ್ಯಕ್ತಿ ಈತನೇ ನೋಡಿ

Mon, 07 Oct 2024-3:49 pm,

 ದಕ್ಷಿಣ ಭಾರತದಲ್ಲಿ ಪ್ರಖ್ಯಾತ ಸಿನಿ ತಾರೆಯರಲ್ಲಿ ಸಾಯಿಪಲ್ಲವಿ, ಸಮಂತಾ ಕೂಡ ಒಬ್ಬರು. ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಈ ನಟಿಯರಿಗೆ ಧ್ವನಿ ನೀಡುವ ಮಹಾನುಭಾವ ಒಬ್ಬ ಹುಡುಗ.

ಈ ಸುದ್ದಿ ಎಂಥವರನ್ನೂ ಅಚ್ಚರಿ ಮೂಡಿಸದೆ ಇರದು. ಏಕೆಂದರೆ ನಟಿಯರಿಗೆ ಓರ್ವ ಯುವಕ ಧ್ವನಿ ನೀಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ತಕ್ಕಂತೆ ಧ್ವನಿ ಬದಲಾವಣೆ ಮಾಡಬೇಕು. ಇದೀಗ ಆ ವ್ಯಕ್ತಿ ಯಾರು? ಸ್ಟಾರ್‌ ನಟಿಯರ ಧ್ವನಿ ಹಿಂದಿರುವ ಕಲಾವಿದನ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳೋಣ.

 

ಆದ್ಯಾ ಹನುಮಂತು ಎಂಬ ವ್ಯಕ್ತಿ ಸಾಯಿ ಪಲ್ಲವಿ, ಸಮಂತಾ ಸೇರಿ ಅನೇಕ ಸ್ಟಾರ್‌ ಹೀರೋಯಿನ್‌ಗಳಿಗೆ ಟ್ರ್ಯಾಕ್‌ ಡಬ್ಬಿಂಗ್‌ ಮಾಡುವ ಕಲಾವಿದ. ತಮಿಳು, ಕನ್ನಡ ಭಾಷೆಯಲ್ಲಿ ಈ ನಟಿಯರಿಗೆ ಧ್ವನಿ ನೀಡೋದು ಇವರೇ.

 

ಅಂದಹಾಗೆ ಎಂಬಿಬಿಎಸ್ ಓದುತ್ತಿರುವಾಗಲೇ ಡಬ್ಬಿಂಗ್ ಆರ್ಟಿಸ್ಟ್ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿರುವ ಆದ್ಯಾ ಹನುಮಂತು, ನೃತ್ಯಗಾರ ಕೂಡ ಹೌದು. ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಹಿಂದೂ ಕೋರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

 

ಆ ಬಳಿಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಪದವಿಯ ಪೂರ್ಣಗೊಳಿಸಿರುವ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರ ಮುದ್ದೇನಹಳ್ಳಿ (ವಿಟಿಯು) ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

 

ರಿಯಾ ಸುಮನ್, ಸಾಯಿ ಪಲ್ಲವಿ, ಆಶಿಕಾ, ಅವಿಕಾ ಗೋರ್, ಮೃಣಾಲ್ ಠಾಕೂರ್, ಆಶಾ ಭಟ್, ರಿತು ವರ್ಮಾ, ರಾಚಲ್ ದೇವಿ, ಸಮಂತಾ, ರುಕ್ಮಣಿ ವಸಂತ್, ಮುಂತಾದ ವಿವಿಧ ಕಲಾವಿದರಿಗೆ ಆದ್ಯಾ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ, 2022 ರ ಅತ್ಯುತ್ತಮ ಡಬ್ಬಿಂಗ್ ಕಲಾವಿದ ಪ್ರಶಸ್ತಿ ಮತ್ತು 2023 ರ ರಾಷ್ಟ್ರೀಯ ಅತ್ಯುತ್ತಮ ಧ್ವನಿ ಪ್ರಶಸ್ತಿಯನ್ನು ಪಡೆದಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link