ಅರಿಶಿಣ ಶಾಸ್ತ್ರ ಮುಗಿಸಿದ ಅದಿತಿ : ನಾಳೆ ಶ್ಯಾನೆ ಟಾಪ್‌ ಹುಡುಗಿಯ ಮದುವೆ

Sat, 26 Nov 2022-1:05 pm,

ಅದಿತಿ ಪ್ರಭುದೇವ ಮತ್ತು ಯಶಸ್ ಪಟ್ಲಾ ಅವರ ಮದುವೆ ನಾಳೆ ನೆರವೇರಲಿದೆ. ಈಗಾಗಲೇ ಹಳದಿ ಶಾಸ್ತ್ರ ನೆರವೇರಿದ್ದು, ಈ ಕುರಿತು ತಮ್ಮ ಅಭಿಮಾನಿಗಳ ಜೊತೆ ಫೋಟೋಗಳನ್ನು ಅದಿತಿ ಹಂಚಿಕೊಂಡಿದ್ದಾರೆ.  

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ರೈತ ಕುಟುಂಬದಲ್ಲಿ ಬೆಳೆದಿರುವ ಯಶಸ್ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯುವ ಮೂಲಕ ರೈತನನ್ನೇ ಮದುವೆಯಾಗುವ ಆಸೆ ಈಡೇರಿಸಿಕೊಂಡಿದ್ದಾರೆ. 

2017ರಲ್ಲಿ ಧೈರ್ಯಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅದಿತಿಯ ಅಭಿನಯ ಕನ್ನಡಿಗರಿಗೆ ತುಂಬಾ ಇಷ್ಟವಾಗಿದೆ.

ಸದ್ಯ ತ್ರೀಪಲ್‌ ರೈಡಿಂಗ್‌ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ನಡುವೆ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link