Aditi prabhudeva : ತಾಳಿ ಕಟ್ಟುವ ಶುಭ ವೇಳೆ ನಾಚಿ ನೀರಾದ ಸೌಂದರ್ಯವತಿ ಅದಿತಿ

Mon, 28 Nov 2022-3:42 pm,

ಮದುವೆ ಕಾರ್ಯಕ್ರಮಗಳು ಪ್ರಾರಂಭವಾದ ದಿನಗಳಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.   

ಇದೀಗ ಅವರ ಮದುವೆ ಸಂಭ್ರಮದ ನೋಡಲು ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅದಿತಿ ಫ್ಯಾನ್ಸ್‌ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ನಿನ್ನೆ (ನ.27) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಯಶಸ್ಸ್‌ ಮದುವೆ ಅದ್ದೂರಿಯಾಗಿ ನಡೆದಿದೆ. 

ರಿಸೆಪ್ಷನ್​ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್​ ನೀಡಿದ್ದರು. 

ಈ ಕುರಿತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಅಲ್ಲದೆ, ಅದಿತಿ ಅರಿಶಿಣ ಶಾಸ್ತ್ರದ ಫೋಟೋಸ್‌ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೆಟ್‌ ಮಾಡಿದ್ದವು.

ಇನ್ನು ಸ್ಯಾಂಡಲ್‌ವುಡ್‌ ಕ್ಯೂಟ್‌ ಬೆಡಗಿಯ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದ್ದೂರಿಯಾಗಿ ಜರುಗಿದೆ. 

ಅದಿತಿಯ ಮದುವೆಗೆ ಸ್ಯಾಂಡಲ್‌ವುಡ್‌ ತಾರೆಯರು ಹಾಜರಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಆಗಮಿಸಿ ದಂಪತಿಗೆ ಶುಭ ಕೋರಿದರು.  

ಅಲ್ಲದೆ, ಕಿರುತೆರೆಯ ನಟ ನಟಿಯರು, ಸ್ನೇಹಿತರು ಅದಿತಿ ಯಶಸ್‌ ಮದುವೆಗೆ ಸಾಕ್ಷಿಯಾದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link