ಏಳು ದಿನಗಳ ಬಳಿಕ ಈ ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ! ಧನ ಕುಬೇರ ನಿಧಿ ಪ್ರಾಪ್ತಿಯೋಗ!
Aditya Gochara 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೇವಲ ಏಳೆ ದಿನಗಳಲ್ಲಿ ಗ್ರಹಗಳ ರಾಜ ಸೂರ್ಯ ತನ್ನ ಸ್ನೇಹಿತನ ರಾಶಿಯಾಗಿರುವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)
ಸಿಂಹ ರಾಶಿ: ಸೂರ್ಯ ಈ ಅವಧಿಯಲ್ಲಿ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಸೂರ್ಯನ ಆಶೀರ್ವಾದದಿಂದ ನಿಮಗೆ ಆಸ್ತಿಪಾಸ್ತಿ-ವಾಹನ ಖರೀದಿಸುವ ಯೋಗ ಒದಗಿ ಬರಲಿದೆ. ಈ ಅವಧಿಯಲ್ಲಿ ನಿಮಗೆ ಎಲ್ಲ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವೃತ್ತಿ ಜೀವನದಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮಗೆ ಹೊಸ ನೌಕರಿ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಕೂಡ ನಿಮ್ಮ ಸ್ಥಾನದ ಲಾಭ ನಿಮಗೆ ಸಿಗಲಿದೆ. ಸೂರ್ಯದೇವನ ದೃಷ್ಟಿ ನಿಮ್ಮ ಜಾತಕದ ಕರ್ಮ ಭಾವದ ಮೇಲಿರುವ ಕಾರಣ ನಿಮ್ಮ ಸ್ಥಾನಮಾನ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ: ಸೂರ್ಯದೇವ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾನೆ. ಇದಲ್ಲದೆ ನಿಮ್ಮ ರಾಶಿಯ ಅಧಿಪತಿ ಮಂಗಳನ ಜೊತೆಗೆ ಆತ ಸ್ನೇಹ ಭಾವದ ಸಂಬಂಧ ಹೊಂದಿದ್ದಾನೆ. ಇದರಿಂದ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಇದಲ್ಲದೆ ನಿಮ್ಮ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ವಿದೇಶಿ ಮೂಲಗಳಿಂದ ನಿಮಗೆ ಧನಲಾಭ ಸಿಗಲಿದೆ. ಬಾಲಸಂಗಾತಿಯ ಬೆಂಬಲ ದೊರೆತು ನಿಮ್ಮ ಜೀವನ ಸುಖಮಯವಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಹಲವು ಮಹತ್ವದ ಪರಿವರ್ತನೆಯನ್ನು ನೀವು ಕಾಣುವಿರಿ. ಅವುಗಳಿಂದ ನಿಮಗೆ ಲಾಭ ಕೂಡ ಸಿಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಸೂರ್ಯ ನಿಮ್ಮ ಜಾತಕದ ನವಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ನಿಮಗೆ ಅದೃಷ್ಟದ ಬೆಂಬಲ ಸಿಗಲಿದ್ದು, ಯಾತ್ರೆಗಳು ಕೂಡ ಸಂಭವಿಸಲಿವೆ.
ಮಕರ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭದ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ಕೂಡ ನಿಮಗಾಗಿ ತೆರೆದುಕೊಳ್ಳಲಿವೆ. ಇದಲ್ಲದೆ ಈ ಅವಧಿಯಲ್ಲಿ ನೀವು ಹಣ ಕೂಡಿಹಾಕುವಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆ ಕೂಡ ನಿಮಗೆ ಅಪಾರ ಲಾಭವನ್ನು ತಂದುಕೊಡಲಿದೆ. ಸೂರ್ಯ ನಿಮ್ಮ ಜಾತಕದ ಅಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ, ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)