ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Mon, 17 Apr 2023-8:28 pm,

ಆರೋಗ್ಯ ತಜ್ಞರ ಪ್ರಕಾರ, ಯಾವುದೇ ವ್ಯಕ್ತಿಗೆ ಉತ್ತಮ ಆರೋಗ್ಯಕ್ಕಾಗಿ ನೀರು, ಆಹಾರ ಎಷ್ಟು ಮುಖ್ಯವೋ ಪ್ರತಿನಿತ್ಯ 7 ಋಣ 9 ಗಂಟೆಗಳವರೆಗೆ ನಿದ್ದೆ ಮಾಡುವುದು ಕೂಡ ತುಂಬಾ ಅಗತ್ಯ. ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. 

ನಿತ್ಯ ಯೋಗ-ವ್ಯಾಯಾಮ ಮಾಡುವುದರಿಂದ ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲ, ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೂ ಕೂಡ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. 

ಈ ವೇಗದ ಜೀವನ ಶೈಲಿಯಲ್ಲಿ ಪ್ರತಿಯೊಂದು ಕೆಲಸವೂ ಬೇಗ ಮುಗಿಯಬೇಕು ಎಂಬ ಆತುರ ಜನರಲ್ಲಿ ಇರುತ್ತದೆ. ಹಾಗಾಗಿಯೇ, ಬಹಳಷ್ಟು ಜನರು ಸಂಸ್ಕರಿಸಿದ ಆಹಾರಗಳ ಮೊರೆ ಹೋಗಿರುವುದು ಸಹ ಸುಳ್ಳಲ್ಲ. ಆದರೆ, ಇದು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಯಾವುದೇ ವ್ಯಕ್ತಿಗೆ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂದರೆ ಅವರ ದೈನಂದಿನ ಆಹಾರದಲ್ಲಿ ಧಾನ್ಯಗಳು, ಪ್ರೊಟೀನ್, ಆರೋಗ್ಯಕರ ಕೊಬ್ಬಿಣ ಆಹಾರಗಳು, ತಾಜಾ ಹಣ್ಣು-ತರಕಾರಿಗಳ ಸೇವನೆ ಬಹಳ ಅಗತ್ಯ.

ನಿತ್ಯ ಕೆಲವರಿಗೆ ಬೆಡ್ ಕಾಫಿ ಕುಡಿಯದಿದ್ದರೆ ದಿನವೇ ಆರಂಭವಾಗುವುದಿಲ್ಲ. ಆದರೆ, ಹಲವು ಸಂಶೋಧನೆಗಳ ಪ್ರಕಾರ, ನಿತ್ಯ ಕೆಫಿನ್ ಸೇವನೆಯು ನಮ್ಮ ಮಾನಸಿಕ ಆರೋಗ್ಯದ ಮೇಲೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂದು ತಿಳಿದು ಬಂದಿದೆ. ಇದನ್ನು ತಪ್ಪಿಸಲು ಕೆಫಿನ್ ಸೇವನೆಯನ್ನು ನಿಯಂತ್ರಿಸಿ. 

ಸೂರ್ಯನ ಕಿರಣಗಳು ಡಿ ವಿಟಮಿನ್ ನ ಉತ್ತಮ ಮೂಲ ಎಂಬುದು ನಿಮಗೆ ತಿಳಿದೇ ಇದೆ. ಪ್ರತಿನಿತ್ಯ 10 ರಿಂದ 15 ನಿಮಿಷಗಳವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳು ಲಭ್ಯವಿದೆ. ಅದರಲ್ಲೂ ಎಳೆ ಬಿಸಿಲಿಗೆ ನಮ್ಮನ್ನು ನಾವು ಒಡ್ಡಿ ಕೊಳ್ಳುವುದರಿಂದ ಅದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link