ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿವೆ ಖಚಿತ ಪರಿಹಾರಗಳು!
ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ದೇಹದಲ್ಲಿ ತಾಮ್ರದ ಕೊರತೆಯಿಂದಲೂ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಉಂಟಾಗಬಹುದು. ಹಾಗಾಗಿ, ನಿತ್ಯ ರಾತ್ರಿ ಒಂದು ತಾಮ್ರದ ಲೋಟದಲ್ಲಿ ನೀರು ಸಂಗ್ರಹಿಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಆ ನೀರನ್ನು ಕುಡಿಯಿರಿ.
ಈರುಳ್ಳಿಯು ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾರದಲ್ಲಿ ಒಂದೆರಡು ಬಾರಿ ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ ಮಸಾಜ್ ಮಾಡಿ. ಅರ್ಧಗಂಟೆ ನಂತರ ಹೇರ್ ವಾಶ್ ಮಾಡಿ. ಇದರಿಂದ ಬುಡದಿಂದಲೂ ಕೂದಲು ಕಪ್ಪಾಗುತ್ತದೆ.
ನಿಯಮಿತವಾಗಿ ಭೃಂಗರಾಜ ತೈಲವನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ಸಾಕಷ್ಟು ಕಡಿಮೆ ಮಾಡಬಹುದು. ಈ ತೈಲವನ್ನು ರಾತ್ರಿ ವೇಳೆ ಕೂದಲಿಗೆ ಹಚ್ಚಿ, ಬೆಳಿಗ್ಗೆ ತಲೆಗೆ ಸ್ನಾನ ಮಾಡಿ.
ಬಿಳಿ ದಾಸವಾಳದ ಎಲೆಯನ್ನು ರುಬ್ಬಿ ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.