ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
ನಿತ್ಯ ಅರ್ಧಗಂಟೆ ವಾಕಿಂಗ್ ಮಾಡುವುದರಿಂದ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು. ಅಂತೆಯೇ, ನೀವು ವಾಕಿಂಗ್ ಮಾಡುವಾಗ ಕೆಲವು ಟಿಪ್ಸ್ ಆನುಸರಿಸುವುದರಿಂದ ತ್ವರಿತವಾಗಿ ತೂಕ ನಷ್ಟಕ್ಕೆ ಸಹಕಾರಿ ಆಗಿದೆ.
ಅಧಿಕ ಕ್ಯಾಲೋರಿ ಬರ್ನ್ ಮಾಡಲು ವೇಗದ ನಡಿಗೆ ಅನುಕೂಲ ಎಂದು ಕೆಲವು ಹೇಳುತ್ತಾರೆ. ಕೆಲವರು ತುಂಬಾ ನಿಧಾನವಾಗಿ ನಡೆಯುತ್ತಾರೆ. ಆದರೆ, ತೂಕ ಇಳಿಕೆಗೆ ನೀವು ಮಧ್ಯಂತರ ವಾಕಿಂಗ್ ಮಾಡುವುದು ಉತ್ತಮ.
ವಾಕಿಂಗ್ ವೇಳೆ ನಿಮ್ಮ ಸ್ನಾಯುಗಳು ಹೆಚ್ಚು ಸಕ್ರಿಯವಾಗಿರುವಂತೆ ತೊಡಗ್ಸಿಕೊಳ್ಳಲು ಹಾಗೂ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಲು ಇಳಿಜಾರಿನಲ್ಲಿ ವಾಕಿಂಗ್ ಮಾಡುವೂದ್ ಪ್ರಯೋಜನಕಾರಿ.
ನೀವು ವಾಕ್ ಮಾಡುವಾಗ ನಿಮ್ಮ ತೋಳುಗಳು ತೂಗಾಡುವ ವೇಗದಲ್ಲಿ ನಡೆಯುವುದರಿಂದ ಇದು ಹೃದಯ ಬಡಿತವನ್ನು ಹೆಚ್ಚಿಸುವುದರ ಜೊತೆಗೆ ಅಧಿಕ ಕ್ಯಾಲೋರಿ ನಷ್ಟಕ್ಕೆ ಪ್ರಯೋಜನಕಾರಿ ಆಗಿದೆ.
ಫಾರ್ವರ್ಡ್ ವಾಕಿಂಗ್ ಮಾಡುವಂತೆಯೇ ವಾಕ್ ಮಾಡುವಾಗ ಬ್ಯಾಕ್ವರ್ಡ್/ಹಿಂಬದಿಯ ನಡಿಗೆ ಅನುಸರಿಸುವುದರಿಂದ ವಿಭಿನ್ನ ಸ್ನಾಯುಗಳನ್ನು ತೊಡಗಿಸಿಕೊಳ್ಳಲು ಹಾಗೂ ತ್ವರಿತ ತೂಕ ನಷ್ಟಕ್ಕೆ ಸಹಕಾರಿ ಆಗಿದೆ.
ವಾಕ್ ಮಾಡುವಾಗ ಮಧ್ಯೆ ಮಧ್ಯೆ ಲಘು ವ್ಯಾಯಾಮಗಳನ್ನು ಮಾಡುವುದು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ನಿಮ್ಮ ಚಯಾಪಚಯವನ್ನು ಹೆಚ್ಚಿಸಿ ಅಧಿಕ ಕ್ಯಾಲೋರಿಗಳನ್ನು ಬರ್ನ್ ಮಾಡಲು ವಾಕಿಂಗ್ ವೇಳೆ ಕೆಲ ಸಮಯ ಜಾಗಿಂಗ್ ಮಾಡುವುದು ಕೂಡ ನಿಮಗೆ ಹೆಚ್ಚು ಲಾಭದಾಯಕವಾಗಿದೆ.
ನೀವು ನಿಮ್ಮ ವಾಕಿಂಗ್ ಅನ್ನು ಮತ್ತಷ್ಟು ಕ್ರಿಯಾತ್ಮಕವಾಗಿಸಲು ವೇಗವಾಗಿ ತೂಕ ಇಳಿಸಲು ವಾಕ್ ಮಾಡುವಾಗ ಡಂಬಲ್ಸ್ ಗಳನ್ನು ಬಳಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.