ಕೊಲೆಸ್ಟ್ರಾಲ್ ಕಂಟ್ರೋಲ್, ಹೃದಯದ ಆರೋಗ್ಯಕ್ಕಾಗಿ ಈ ಡಯಟ್ ಚಾರ್ಟ್ ಅಳವಡಿಸಿಕೊಳ್ಳಿ

Thu, 12 Oct 2023-11:39 am,

ನೀವು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪರಿಹಾರ ಪಡೆಯಲು ಹಾಗೂ ಆರೋಗ್ಯಕರ ಹೃದಯವನ್ನು ಪಡೆಯಲು ನಿಮ್ಮ ಆಹಾರಕ್ರಮ ಬಹಳ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ಉಲ್ಲೇಖಿಸಲಾದ ಡಯಟ್ ಚಾರ್ಟ್ ಅನ್ನು ಇಂದಿನಿಂದಲೇ ಅಳವಡಿಸಿಕೊಳ್ಳಿ. ಅವುಗಳೆಂದರೆ... 

ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿರುವ ಧಾನ್ಯಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಬ್ಲಡ್ ಶುಗರ್ ಅನ್ನು ನಿಯಂತ್ರಿಸುವುದರ ಜೊತೆಗೆ ಡಯಾಬಿಟಿಸ್ ಅಪಾಯವನ್ನೂ ಸಹ ಕಡಿಮೆ ಮಾಡಬಹುದು. ರಾಗಿ,  ರೋಲ್ಡ್ ಓಟ್ಸ್, ಬ್ರೌನ್ ರೈಸ್‌ನಂತಹ ಧಾನ್ಯಗಳಲ್ಲಿ ಕರಗುವ ಫೈಬರ್‌ ಹೆಚ್ಚಾಗಿದೆ. 

ಸಸ್ಯ ಆಧಾರಿತ ಪ್ರೋಟೀನ್, ಆಹಾರದ ಫೈಬರ್ ಮತ್ತು ಪ್ರಮುಖ ಖನಿಜಗಳ ಅತ್ಯುತ್ತಮ ಮೂಲಗಳಾದ ಕಡಲೆಕಾಯಿ, ಬೀನ್ಸ್, ಬಟಾಣಿಯಂತಹ ದ್ವಿದಲ ಧಾನ್ಯಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಕಡಿಮೆ ಕಂಡುಬರುತ್ತದೆ. ಮಾತ್ರವಲ್ಲ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಕ್ರಿಯವಾಗಿ  ಕೆಲಸ ಮಾಡುತ್ತದೆ. 

ಆರೋಗ್ಯ ತಜ್ಞರ ಪ್ರಕಾರ, ಬಾದಾಮಿ, ವಾಲ್‌ನಟ್ಸ್, ಕಡಲೆಕಾಯಿ, ಅಗಸೆಬೀಜ, ಸೆಣಬಿನ ಮತ್ತು ಚಿಯಾ ಬೀಜಗಳು ಹೃದಯದ ಆರೋಗ್ಯಕ್ಕೆ ಅನುಕೂಲಕರವಾದ ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇವುಗಳ ಬಳಕೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಂಟ್ರೋಲ್ ಮಾಡಬಹುದು. 

ಆರೋಗ್ಯ ತಜ್ಞರ ಪ್ರಕಾರ, ಹಸಿರು ಸೊಪ್ಪು-ತರಕಾರಿಗಳಲ್ಲೂ ಸಹ ವಿಟಮಿನ್ಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿ ಕಂಡು ಬರುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ನಿರ್ವಹಣೆಗೆ ಮುಖ್ಯವಾಗಿದೆ ಮತ್ತು ನೈಟ್ರೇಟ್, ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ, ನಿಮ್ಮ ನಿತ್ಯದ ಆಹಾರದಲ್ಲಿ ಸಾಧ್ಯವಾದಷ್ಟು ಹಸಿರು ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸಿ. 

ಸ್ಟ್ರಾಬೆರಿಗಳು, ರಸ್ಬೆರಿ, ದ್ರಾಕ್ಷಿ, ದಾಳಿಂಬೆಯಂತಹ ಹಣ್ಣುಗಳಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ ಕಂಡು ಬರುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ ಆಗಿದೆ. ಇವುಗಳನ್ನು ನಿತ್ಯದ ಡಯಟ್ ಭಾಗವಾಗಿಸುವುದರಿಂದ ಕೊಲೆಸ್ಟ್ರಾಲ್ ನಿರ್ವಹಣೆ ಸುಲಭವಾಗುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು. 

ನೀವು ನಿಮ್ಮ ದೈನಂದಿನ ಆಹಾರಗಳಲ್ಲಿ ವಾಲ್‌ನಟ್ಸ್, ಅಗಸೆ ಬೀಜಗಳು, ಚಿಯಾ ಬೀಜಗಳು, ಸೆಣಬಿನ ಬೀಜಗಳು, ಬೀನ್ಸ್ ನಂತಹ  ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದು ಕೂಡ ಅಗತ್ಯವಾಗಿದೆ. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣದ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. 

ಆಲಿವ್ ಎಣ್ಣೆ ಅಥವಾ ವರ್ಜಿನ್ ಆಲಿವ್ ಎಣ್ಣೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. 

ಆರೋಗ್ಯ ತಜ್ಞರ ಪ್ರಕಾರ, ಗ್ರೀನ್ ಟೀ ಕ್ಯಾಟೆಚಿನ್‌ಗಳಂತಹ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ನಿಯಮಿತವಾಗಿ ಗ್ರೀನ್ ಟೀ ಸೇವನೆಯು LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯಕವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. 

ತೂಕ ಇಳಿಕೆಯಲ್ಲಿ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡಾರ್ಕ್ ಚಾಕೊಲೇಟ್‌ನಲ್ಲಿ ಕನಿಷ್ಠ 70 ಪ್ರತಿಶತದಷ್ಟು ಕೋಕೋ ಅಂಶವಿದ್ದು ಹೃದಯದ ಆರೋಗ್ಯಕ್ಕೆ ಇದು ಹೆಚ್ಚು ಪ್ರಯೋಜನಕಾರಿ ಆಗಿದೆ. ಹಾಗಾಗಿ, ಡಾರ್ಕ್ ಚಾಕೊಲೇಟ್ ಸೇವನೆಯಿಂದಲೂ ಕೊಲೆಸ್ಟ್ರಾಲ್ ನಿಯಂತ್ರಿಸಿ, ಉತ್ತಮ ಆರೋಗ್ಯಕರ ಹೃದಯವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link