Aero India-2021:ಚಿತ್ರಪಟಗಳಲ್ಲಿ ಹೀಗಿದೆ ಏರೋಶೋ..! ಪ್ರಬಲ ವೈರಿವ್ಯೂಹವನ್ನು ಛಿದ್ರ ಛಿದ್ರ ಮಾಡಬಲ್ಲದು ನಮ್ಮ ವಾಯುಪಡೆ.! ಇದು ನಮ್ಮ ತಾಕತ್ತು
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾದ ಏರೋ ಇಂಡಿಯಾ 2021 (Aero India-2021) ಪ್ರದರ್ಶನದಲ್ಲಿ ಸುಖೋಯಿ Su-30MKI ಯುದ್ಧವಿಮಾನಗಳಿಂದ ತ್ರಿಶೂಲ ವ್ಯೂಹ (Trishul formation) ರಚನೆ
ವಾಯುಪಡೆಯ ಈ ಸುಖೋಯಿ Su-30MKI ಯುದ್ಧವಿಮಾನದ ಗಾಂಭೀರ್ಯತೆ ನೋಡಿ. ಇದು ಅತಿಂಥ ಪೈಟರ್ ಅಲ್ಲ. ಇದಕ್ಕೆ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ (BrahMos supersonic cruise missile) ಜೋಡಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿಜೊತೆ ಸಜ್ಜಾಗಿರುವ ಒಂದು squadron ವಾಯುಪಡೆಯಲ್ಲಿದೆ. ಇದ 400 ಕಿಲೋಮೀಟರ್ ವರ್ತುಲದಲ್ಲಿ ಯಾವುದೇ ಟಾರ್ಗೆಟ್ ಗೆ ಮಿಸೈಲ್ ಸಿಡಿಸಬಲ್ಲದು
ಇದು DRDO ನಿರ್ಮಿಸುತ್ತಿರುವ 5ನೇ ತಲೆಮಾರಿನ ಯುದ್ಧವಿಮಾನ. ಇನ್ನೂ ನಿರ್ಮಾಣ ಹಂತದಲ್ಲಿದೆ. ಮಲ್ಟಿರೋಲ್ ಯುದ್ಧ ವಿಮಾನದ ಎಲ್ಲಾ ಸಾಮರ್ಥ್ಯದೊಂದಿಗೆ ಇದು ಅಖಾಡಕ್ಕಿಳಿಯಲಿದೆ. ವಿಶೇಷ ವೆಂದರೆ ಇದು ಸ್ಟೆಲ್ತ್ (stealth ) ಗುಣಲಕ್ಷಣ ಇರುವ ಬಲಶಾಲಿ ಯುದ್ಧವಿಮಾನ.
ಏರೋ ಶೋನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್. ಇದು ಕರಾವಳಿ ರಕ್ಷಣೆಗಿರುವ ಬ್ರಹ್ಮೋಸ್. ನೌಕಾಪಡೆಗೆ ಸದ್ಯದಲ್ಲೇ ಸೇರ್ಪಡೆಯಾಗಲಿದೆ.
ಭಾರತ ದೇಶಿಯವಾಗಿ ತೇಜಸ್ ಲಘ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವಾಯುಸೇನೆ ಹೆಚ್ಎಎಲ್ ನಿಂದ (Hindustan Aeronautics Limited (HAL) 83 ತೇಜಸ್ ಯುದ್ದ ವಿಮಾನ ಖರೀದಿಸಲಿದೆ. ಈ ಒಪ್ಪಂದದ ಪ್ರತಿಯನ್ನು ಹೆಚ್ ಎಎಲ್ ಗೆ ಹಸ್ತಾಂತರಿಸಲಾಯಿತು
ಇದು ರಾಂಪೇಜ್ ಕ್ಷಿಪಣಿ. ಆಕಾಶದಿಂದ ನೆಲಕ್ಕೆ ಹೊಡೆಯಲಿರುವ ಮಿಸೈಲ್ ಇದು. ಸದ್ಯವೇ ಇದು ವಾಯುಪಡೆಯ ಬತ್ತಳಿಕೆ ಸೇರಲಿದೆ. ಇಸ್ರೇಲಿನ ಎಲ್ಬಿಟ್ ಸಿಸ್ಟಮ್ಸ್ ಇದನ್ನು ನಿರ್ಮಿಸಿದೆ.