`ಈ ಆಟಗಾರ ನಮಗೆ ಬೇಕೇ ಬೇಕು`..! ಟೀಂ ಇಂಡಿಯಾದ ಸ್ಟಾರ್‌ ಆಟಗಾರನಿಗಾಗಿ ಪಟ್ಟು ಹಿಡಿದು ಕೂತ ಅಫ್ಘಾನಿಸ್ತಾನ ತಂಡ?

Thu, 26 Sep 2024-7:33 am,

Hashmatullah Shahidi: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಸದ್ಯ ದೊಡ್ಡ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸುತ್ತಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಶಕ್ತಿಶಾಲಿ ತಂಡಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.  

ಆದರೆ, ಭಾರತದ ವಿರುದ್ಧ ಅಫ್ಘಾನಿಸ್ತಾನ ಇನ್ನೂ ಒಂದೇ ಒಂದು ಭಾರಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಗೆದ್ದಿಲ್ಲ. ಅಫ್ಘಾನಿಸ್ತಾನ ತಂಡದ ನಾಯಕರಾಗಿರುವ ಹಸ್ಮದುಲ್ಲಾ ಹಾಗೂ ಕೋಚ್ ಜನಾರ್ಥನ್ ದ್ರುತ್ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದು, ಎಷ್ಟೇ ಪ್ರಯತ್ನ ಪಟ್ಟರು ಕೂಡ ಎಂತಹ ಶಕ್ತಿಶಾಲಿ ತಂಡಗಳನ್ನೆ ಸೋಲಿಸುವಲ್ಲಿ ಯಶಸ್ವಿಯಾದ ಅಫ್ಘಾನಿಸ್ಥಾನ ತಂಡ ಭಾರವನ್ನು ಒಂದು ಭಾರಿಯೂ ಕಡ ಸೋಲಿಸಲು ಸಾಧ್ಯವಾಗಲಿಲ್ಲ.

ಹೀಗಿರುವಾಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ಅಫ್ಘಾನಿಸತಾನ ತಂಡದ ನಾಯಕ ಹಸ್ಮತುಲ್ಲಾ ಸಂದರ್ಶನ ನೀಡಿದ್ದು, ಅವರು ಹೇಳಿತುವ ಹೇಳಿಕೆ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಯಾವುದಾದರು ಭಾರತ ತಂಡದ ಆಟಗಾರರನ್ನು ನಿಮ್ಮ ತಂಡಕ್ಕೆ ಸೇರಿಸಕೊಳ್ಳುವ ಅವಕಾಶ ಸಿಕ್ಕರೆ ನೀುಯಾರನ್ನುಆಯ್ಕೆ ಮಾಡುತ್ತೀರಿ ಎಂದು ನಿರೂಪಕರು ಸಂದರ್ಶನದಲ್ಲಿ ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಹಜ್ಮತುಲ್ಲಾ, "ಒಂದಲ್ಲ ಹಲವು ಹೆಸರುಗಳಿವೆ, ಆದರೆ ನಾನು ಒಬ್ಬರನ್ನು ಆಯ್ಕೆ ಮಾಡಬೇಕಾದರೆ, ನಾನು ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತೇನೆ" ಎಂದಿದ್ದಾರೆ.

"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ ಎಂಬ ಅಂಕಿಅಂಶಗಳನ್ನು ಪರಿಶೀಲಿಸಿ. ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ದಾಟಿದ್ದಾರೆ. ಅದು ಯಾರೂ ಮುಟ್ಟದ ದೊಡ್ಡ ಸಾಧನೆ. ಯಾರು ಬೇಕಾದರೂ ನೂರು ಅಂಕಗಳ ಬಗ್ಗೆ ಸುಲಭವಾಗಿ ಮಾತನಾಡಬಹುದು. ಆದರೆ ಮೈದಾನದಲ್ಲಿ ಹೋಗಿ ಶತಕ ಬಾರಿಸುವುದು ನಿಜಕ್ಕೂ ಸಾಧ್ಯವಿಲ್ಲ."

"ಆದರೆ ವಿರಾಟ್ ಕೊಹ್ಲಿ ಈ ಸಾಧನೆಯನ್ನು 50 ಬಾರಿ ಮಾಡಿದ್ದರೆ, ವಿರಾಟ್ ಕೊಹ್ಲಿ ಅವರ ಸಾಧನೆಯ ಕುರಿತು ಅವರು ಮಾಡಿದ ಸಾಧನೆಗಳು ಮಾತನಾಡುತ್ತವೆ" ಎಂದು ಹಸ್ಮತುಲ್ಲಾ ಹೇಳಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ 534 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 26965 ರನ್ ಗಳಿಸಿದ್ದಾರೆ. 

ಇದರಲ್ಲಿ 80 ಶತಕ ಮತ್ತು 140 ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ ಸದ್ಯ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಮತ್ತು 17 ರನ್ ಗಳಿಸಿ ಪಂದ್ಯ ಸೋತಿದ್ದರು. ಇದರಿಂದಾಗಿ ಕಾನ್ಪುರದಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಲು ವಿರಾಟ್ ಕೊಹ್ಲಿ ಪ್ರೇರಣೆಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link